Publish Date: Tue, 07 Mar 2023 (18:34 IST)
Updated Date: Tue, 07 Mar 2023 (18:37 IST)
ಮಂಗಳೂರಿನ ನಂತೂರಿನಲ್ಲಿರುವ ಹೆದ್ದಾರಿ ಇಲಾಖೆ ಕಚೇರಿಗೆ ರೈತರು ಮುತ್ತಿಗೆ ಹಾಕಿದ್ರು. ಮಂಗಳೂರು - ಮೂಡುಬಿದ್ರೆ ಹೆದ್ದಾರಿ ಕಾಮಗಾರಿ ವೇಳೆ ಪರಿಹಾರ ಕೊಡದೆ ವಂಚಿಸುತ್ತಿರುವ ಸಂಸದ ನಳಿನ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ಹೆದ್ದಾರಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭ್ರಷ್ಟರು ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶಗೊಂಡರು. ಮಂಗಳೂರು- ಮೂಡುಬಿದ್ರೆ ಹೆದ್ದಾರಿ ಅಗಲೀಕರಣ ನೆಪದಲ್ಲಿ ಜನರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡುವ ಮೂಲಕ ಸಂಸದ ನಳಿನ್ ಕುಮಾರ್ ವಿರುದ್ದ ಕಿಡಿಕಾರಿದ್ರು.