ಕರೆ ಮಾಡಿದದ್ದ ವಂಚಕರು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿದ್ದರು. ಕೆಲ ದಿನಗಳ ನಂತರ ಆನ್ ಲೈನ್ ಶಾಪಿಂಗ್ ಹಣ ಪಾವತಿಸುತ್ತಿರುವಾಗ ಮೊಬೈಲ್ ನಲ್ಲಿ ಹಣ ಕಡಿತದ ಮೆಸೇಜ್ ನೋಡಿದೆ. ಅಂದು 89 ಸಾವಿರ ರೂ. ನನ್ನ ಖಾತೆಯಿಂದ ಕಡಿತವಾಗಿತ್ತು. ಆವತ್ತು ನಾನು ಮೋಸ ಹೋಗಿರೋದು ತಿಳಿಯಿತು. ಕೂಡಲೇ ಅಂದು ಕರೆ ಮಾಡಿದ್ದ ವ್ಯಕ್ತಿಗೆ ಫೋನ್ ಮಾಡಿ ನನ್ನ ಹಣ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ನೀವು ಎಲ್ಲೇ ಕುಳಿತದ್ದರೂ ನಿಮ್ಮನ್ನು ಹಿಡಿಯಬಲ್ಲೆ ಎಂದು ಬೆದರಿಕೆ ಹಾಕಿದೆ.ಸೈಬರ್ ವಂಚಕರು ವ್ಯವಸ್ಥಿತವಾಗಿ ಸ್ವಲ್ಪವೂ ಅನುಮಾನ ಬರದಂತೆ ಅಕ್ಟೋಬರ್ 11ರಂದು ಶಂಕರ್ ಬಿದರಿ ಅವರ ಮೊಬೈಲ್ ಗೆ ಮೆಸೇಜ್ ಕಳುಹಿಸಿದ್ದರು. ಮೆಸೇಜ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಗ್ಗತ್ತಿಸಲಾಗಿರುವ ಪ್ಯಾನ್ ಸಂಖ್ಯೆ ನವೀಕರಿಸುವಂತೆ ಹೇಳಲಾಗಿತ್ತು. ಅಕ್ಟೋಬರ್ 12ರಂದು ಮಧ್ಯಾಹ್ನ ಕರೆ ಮಾಡಿ ತಮ್ಮನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ. ನಿನ್ನೆಯೇ ಮೆಸೇಜ್ ಬಂದಿರುವ ವಿಷಯ ತಿಳಿಸಿ ನಂಬಿಕೆ ಗಳಿಸಿದ್ದಾರೆ. ಇತ್ತ ದುಬೈಗೆ ಹೊರಡುವ ಅವಸರದಲ್ಲಿದ್ದ ಶಂಕರ್ ಬಿದರಿ ಸಹ ಓಟಿಪಿ ಶೇರ್ ಮಾಡಿ ಹಣ ಕಳೆದುಕೊಂಡಿದ್ದರು.