ಸವದತ್ತಿಯ ಖ್ಯಾತ ಉದ್ಯಮಿ ರಾಜ್ಯ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿ ಆನಂದ ಚೋಪ್ರಾ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸ್ಪರ್ಧಿಸಿ ಪರಾಭವಗೊಂಡಿದ್ದ ಆನಂದ ಛೋಪ್ರಾ
ಮೇಲೆ ತಡರಾತ್ರಿ ಹಲ್ಲೆ ನಡೆದಿದೆ. ಸವದತ್ತಿ ಪಟ್ಟಣದಲ್ಲಿ ಘಟನೆ ನಡೆದಿದ್ದು ಬೈಕಿನಲ್ಲಿ ಮನೆಗೆ ತೆರಳುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಛೋಪ್ರಾ ಅವರ ತಲೆ, ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ಐ.ಸಿ.ಯು ನಲ್ಲಿ ದಾಖಲಾಗಿದ್ದಾರೆ.
ಛೋಪ್ರಾ ಅವರ ಮೇಲೆ ಯಾರು ಹಲ್ಲೆ ನಡೆಸಿದರು? ಯಾತಕ್ಕಾಗಿ ಹಲ್ಲೆ ನಡೆಯಿತು? ಎಂಬುದು ಗೊತ್ತಾಗಿಲ್ಲ. ಛೋಪ್ರಾ ಅವರು ಕಳೆದ ಚುನಾವಣೆಯಲ್ಲಿ ಕೇವಲ 5 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.