Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಕಲಿ ನಂಬರ್ ಪ್ಲೇಟ್; ಮಾಡ್ತಿದ್ದ ದಂಧೆ ಎಂಥದ್ದು…!

ನಕಲಿ ನಂಬರ್ ಪ್ಲೇಟ್; ಮಾಡ್ತಿದ್ದ ದಂಧೆ ಎಂಥದ್ದು…!
ಮಂಗಳೂರು , ಗುರುವಾರ, 28 ಫೆಬ್ರವರಿ 2019 (20:58 IST)
ಅಪರಾಧ ಜಗತ್ತಿಗೆ ಎಂಟ್ರಿ ಕೊಟ್ಟ ಪಾತಕಿಗಳು ತರಹೇವಾರಿ ಐಡಿಯಾಗಳನ್ನು ಬಳಸಿ ದಿಢೀರ್ ಶ್ರೀಮಂತರಾಗಬೇಕೆಂದು ಸ್ಕೆಚ್ ಹಾಕೋದು ಕಾಮನ್. ಆದರೆ ಅಂತಹ ಸ್ಕೇಚ್ ಹಾಕ್ತಿದ್ದ ಖದೀಮರನ್ನು ಹೆಡೆಮುರಿಕಟ್ಟಲಾಗಿದೆ.

ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಐವರು ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಮಾರಕಾಸ್ತ್ರಗಳನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೇರಳದ ತ್ರಿಶ್ಯೂರ್ ನಿವಾಸಿಗಳಾದ ಸುಜಿತ್ ಜಿ. (23), ಮುಹಮ್ಮದ್ ಫಾಝಿಲ್ (25), ಮುಹಮ್ಮದ್ ಶರೀಫ್ (24), ಅನಸ್ (22), ಸಲೀಂ (29) ಬಂಧಿತ ಆರೋಪಿಗಳು. ಬಂಧಿತರಿಂದ ನಾಲ್ಕು ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ಪಡೆಯಾಗಿದೆ.

ಉಳ್ಳಾಲ ಠಾಣೆ ವ್ಯಾಪ್ತಿಯ ತಲಪಾಡಿ ಬಳಿ ಚೂರಿ, ರಾಡ್, ದೊಣ್ಣೆ, ಗಮ್ ಟ್ಯಾಪರ್ ರೋಲ್ಗಳನ್ನು ಇಟ್ಟುಕೊಂಡು ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿಗಳು ಶೋಕಿ ಜೀವನ ನಡೆಸಲು ಕೃತ್ಯ ನಡೆಸುತ್ತಿದ್ದಾರೆ. ಕೃತ್ಯ ನಡೆಸಲು ಬಳಸಿದ  ಕಾರಿಗೆ ಅದರ ಮೂಲ ನೋಂದಣಿ ನಂಬರ್ ಬದಲಾಗಿ ನಕಲಿ ನಂಬರ್ನ್ನು ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆ ಮನೆ ಕೇಳುವ ನೆಪ; ಮಹಿಳೆಗೆ ಎಂಥಾ ಗತಿ ಬಂತು?