Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಕುಟುಂಬಕ್ಕೆ ಆಗಿದ್ದೇನು?

ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಕುಟುಂಬಕ್ಕೆ ಆಗಿದ್ದೇನು?
ಚಿಕ್ಕಬಳ್ಳಾಪುರ , ಸೋಮವಾರ, 11 ಫೆಬ್ರವರಿ 2019 (14:03 IST)
ಜಾತ್ರೆ ಹಾಗೂ ಸಭೆ ಸಮಾರಂಭಗಳಿಗಾಗಿಯೇ ಕಾಯುತ್ತಿದ್ದ ಅವರು ಮಾಡಬಾರದ ಕೆಲಸ ಮಾಡುತ್ತಲೇ ಜನರಿಗೆ ಶಾಕ್ ನೀಡುತ್ತಿದ್ದರು.

ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳರನ್ನು ಬಂಧನ ಮಾಡಿದ್ದಾರೆ. ಜಾತ್ರೆ, ಸಭೆ ಸಮಾರಂಭಗಳಲ್ಲಿ ಚಿನ್ನಾಭರಣ ಎಗರಿಸುತ್ತಿದ್ದ ಐಷಾರಾಮಿ ಕಳ್ಳರ ಕುಟುಂಬವನ್ನು ಬಂಧನ ಮಾಡಲಾಗಿದೆ.

ಶ್ರೀಕಾಂತ್, ಪತ್ನಿಯರಾದ ಲಕ್ಷ್ಮೀ, ಗಾಯಿತ್ರಿ, ಸಹೋದರಿ ಶಿವಮ್ಮ ಹಾಗೂ ಭೋಜ ಬಂಧಿತರಾಗಿದ್ದಾರೆ. ಬಂಧಿತರಿಂದ 410 ಗ್ರಾಂ ಚಿನ್ನಾಭರಣ, ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ. 5 ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಮಾಡಲಾಗಿದೆ.

ಚಿಕ್ಕಬಳ್ಳಾಪುರ ತಾಲ್ಲೂಕು ಸೋಲಾಲಪ್ಪನದಿನ್ನೆ ಹಾಗೂ ಚಿತ್ರಾವತಿ ಜಾತ್ರೆಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದವು.
ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವ ಕುಟುಂಬದ ಸದಸ್ಯರು, ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ನಿವಾಸಿಗಳಾಗಿದ್ದಾರೆ.  ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಗರಂ ಆಗಿದ್ಯಾಕೆ?