ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕಾರ್ಯಚರಿಸುತ್ತಿದ್ದ ಅಲ್ ಖೈದಾ ಸಂಘಟನೆಯ ಶಾಖೆಯನ್ನು ಭೇದಿಸಿರುವ ಪೊಲೀಸರು ಲಕ್ನೋ ಸೇರಿದಂತೆ ವಿವಿಧ ನಗರಗಳ ಜನದಟ್ಟಣೆ ಪ್ರದೇಶದಲ್ಲಿ ಆತ್ಮಾಹುತಿಗೆ ಸಂಚು ರೂಪಸಿದ್ದ ಉಗ್ರರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ನಿವಾಸಿಗಳಾದ ಮಿನ್ ಹಜ್ ಮತ್ತು ಮಸೇರುದ್ದೀನ್ ಎಂಬ ಇಬ್ಬರು ಉಗ್ರರನ್ನು ಉತ್ತರ ಪ್ರದೇಶದ ಉಗ್ರರ ನಿಗ್ರಹ ಪಡೆ ಬಂಧಿಸಿದೆ. ಇವರು ಅಲ್ ಖೈದಾ ಸಂಘಟನೆ ಅನ್ಸರ್ ಗುಜಹತ್ ಉಲ್ ಹಿಂದ್ ಸಂಪರ್ಕ ಹೊಂದಿದ್ದರು. ದಾಳಿಯ ವೇಳೆಯ ಸ್ಫೋಟಕ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಗಡಿ ಭಾಗದ ಪೇಶಾವರ್ ಮತ್ತು ಕೆಟ್ಟಾ ಪ್ರದೇಶಗಳಲ್ಲಿ ಅಲ್ ಖೈದಾ ಈಗಲೂ ಸಕ್ರಿಯವಾಗಿದ್ದು, ಲಕ್ನೋದ ಕಿಶೋರಿ ಪಟ್ಟಣದಲ್ಲಿ ವಾಸವಾಗಿದ್ದ ಇವರ ಮನೆಯ ಮೇಲೆ ದಾಳಿ ನಡೆಸಿ ಪಿಸ್ತೂಲು ಹಾಗೂ ಹಲವು ಸ್ಫೋಟಕಗಳಿಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.