Publish Date: Tue, 18 Jun 2019 (17:33 IST)
Updated Date: Tue, 18 Jun 2019 (17:38 IST)
ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯೊಬ್ಬಳು ಬರೋಬ್ಬರಿ ಕೋಟಿ ಕೋಟಿ ಹಣ ದೋಚಿರುವ ಘಟನೆ ನಡೆದಿದೆ.
ಕಾರವಾರದ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯ ಕರ್ಮ ಖೆಡಪ್ ಎಂಬುವರೇ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆಯನ್ನು ನಂಬಿ 1.96 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಅಮೆರಿಕಾದ ಸೇನೆಯಲ್ಲಿ ಕೆಲಸ ಮಾಡುತ್ತಿರೋದಾಗಿ ನಂಬಿಸಿದ್ದ ಎಸ್ಜಿಟಿ ರೋಲ್ಯಾಂಡ್ ಮಿಶೆಲ್ ಎಂಬಾಕೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಳು. ಬಳಿಕ ವಾಟ್ಸಪ್ ನಂಬರ್ ಪಡೆದುಕೊಂಡು ಚಾಟ್ ಮಾಡುತ್ತಿದ್ದಳು.
ಭಾರತಕ್ಕೆ ಬಂದು ಅನಾಥ ಮಕ್ಕಳ ಸೇವೆ ಮಾಡುವ ಆಸೆ ಇದೆ ಎಂದು ಅದಕ್ಕಾಗಿ 2.5 ಮಿಲಿಯನ್ ಅಮೆರಿಕನ್ ಡಾಲರ್ ನೀಡೋದಾಗಿ ಹೇಳಿದ್ದಳು. ಈ ನಡುವೆ ವಿಲಿಯಮ್ ಜಾನ್ಸನ್ ಎಂಬಾತನ ಮೂಲಕ ಹಣ ತಲುಪಿಸುವುದಾಗಿ ತಿಳಿಸಿದ್ದಾಳೆ. ಜಾನ್ಸನ್ ವಿವಿಧ ತೆರಿಗೆ ಪಾವತಿ ಮಾಡಬೇಕಿದೆ ಎಂದು ಕರ್ಮ ಅವರಿಂದ ಹಣ ಹಾಕಿಸಿಕೊಂಡಿದ್ದಾನೆ. ಖಾತೆಗೆ ಹಣ ಬಿದ್ದ ತಕ್ಷಣ ಚಾಲಾಕಿ ಮಹಿಳೆ ಸಂಪರ್ಕ ಕಡಿತಗೊಳಿಸಿಕೊಂಡಿದ್ದಾಳೆ. ಹೀಗಾಗಿ ಆರೋಪಿಗಳನ್ನು ಬಂಧನ ಮಾಡುವಂತೆ ಕರ್ಮ, ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
Jagadeesh
Publish Date: Tue, 18 Jun 2019 (17:33 IST)
Updated Date: Tue, 18 Jun 2019 (17:38 IST)