ಕೇರಳದಲ್ಲಿ ಕಳೆದ ಬಾರಿ ಎದುರಾದ ಜಲಪ್ರಳಯದಿಂದ ಹೊರಬರುವುದು ತುಂಬಾ ಕಷ್ಟಕರವಾಗಿತ್ತು. ಕೇರಳ ಸರಕಾರ ನಿರಾಶ್ರಿತರನ್ನು ಶಿಬಿರಗಳಿಗೆ ಸ್ಥಳಾಂತರಿಸಿದಾಗ ಮಹಿಳೆಯರಿಗೆ ಪೀರಿಯಡ್ ಬಂದಾಗ ನ್ಯಾಪ್‌ಕಿನ್ ಬದಲಿಗೆ ಕಪ್‌ಗಳನ್ನು ನೀಡಿತ್ತು. ಹಲವಾರು ಮಹಿಳೆಯರಿಗೆ ಇದು ತುಂಬಾ ಉಪಯುಕ್ತ ಎಂದನ್ನಿಸಿತ್ತು. ಅಲ್ಫುಜಾ ಜಿಲ್ಲೆಯಲ್ಲಿ ಅಲ್ಲಿನ ಮುನ್ಸಿಪಾಲಿಟಿ 5000 ಮಹಿಳೆಯರಿಗೆ ಉಚಿತವಾಗಿ ಪೀರಿಯಡ್ ಕಪ್‌ಗಳನ್ನು ವಿತರಿಸಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕೇರಳ ಮುನ್ಸಿಪಾಲಿಟಿ ಕಾರ್ಯದರ್ಶಿ, ಮೆನುಸ್ಟ್ರುವಲ್ ಕಪ್‌ಗಳು ಪ್ರತಿಯೊಬ್ಬ ಮಹಿಳೆಗೆ ತುಂಬಾ ಉಪಯುಕ್ತ. ಅದರ ಆಧಾರದ ಮೇಲೆ ಆರಂಭಿಕವಾಗಿ 5000 ಮಹಿಳೆಯರಿಗೆ ಉಚಿತವಾಗಿ ಮೆನುಸ್ಟ್ರುವಲ್ ಕಪ್‌ಗಳು ವಿತರಿಸಲಾಗಿತ್ತು.ಇದಕ್ಕೆ ಕೋಲಾ ಇಂಡಿಯಾ ಸಂಸ್ಥೆ ಕೂಡಾ ಸಹಭಾಗಿತ್ವ ಹೊಂದಿತ್ತು ಎಂದು ತಿಳಿಸಿದ್ದಾರೆ.
ಅದಕ್ಕಿಂತ ಹೆಚ್ಚಾಗಿ ಪೀರಿಯಡ್ ಸಂದರ್ಭಗಳಲ್ಲಿ ಹಲವಾರು ಮಹಿಳೆಯರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಮಹಿಳೆಯರು ಪ್ರತಿ ತಿಂಗಳು ನ್ಯಾಪ್‌ಕಿನ್ ಖರೀದಿಗೆ 50 ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ.ವಾರ್ಷಿಕವಾಗಿ 600 ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ಅಂದರೆ 10 ವರ್ಷಗಳಿಗೆ 6 ಸಾವಿರ ರೂಪಾಯಿಗಳನ್ನು ನ್ಯಾಪ್‌ಕಿನ್‌ಗಾಗಿ ವೆಚ್ಚ ಮಾಡಿದಂತಾಗುತ್ತದೆ. ಆದರೆ ಮೆನುಸ್ಟ್ರುವೆಲ್ ಕಪ್ ಒಂದು ಬಾರಿ ಖರೀದಿಸಿದರೆ 10 ವರ್ಷಗಳವರೆಗೆ ಬಳಸಬಹುದಾಗಿದೆ.
ನೀವು ಅದನ್ನು ಸರಿಯಾದ ರೀತಿಯಲ್ಲಿ ಒಮ್ಮೆ ಅನ್ವಯಿಸಿದರೆ ಯಾವುದೇ ಭಯವಿಲ್ಲ. 2 ಗಂಟೆಗಳಿಗೊಮ್ಮೆ ಸ್ವಚ್ಚ ನೀರಿನಲ್ಲಿ ತೊಳೆಯಿರಿ. ನಂತರ ಅದನ್ನು ಬಿಸಿ ನೀರಿನಲ್ಲಿ ತೊಳೆದು ಮುಂದಿನ ಬಾರಿ ಬಳಸಿ. ಇದಲ್ಲದೆ, ಇದು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿಲ್ಲ. ”ಅಲ್ಲದೆ, ಅನೇಕ ಮಹಿಳೆಯರು ಮುಟ್ಟಿನ ಕಪ್ಗಳನ್ನು ಬಳಸಲು ಸುಲಭ ಮತ್ತು ಆರಾಮದಾಯಕ ಎಂದು ಹೇಳುತ್ತಿರುವುದು ಮಹಿಳೆಯರಿಗೆ ವರದಾನವಾಗಿದೆ.