Publish Date: Wed, 17 Aug 2022 (19:21 IST)
Updated Date: Wed, 17 Aug 2022 (20:23 IST)
ಸಿಲಿಕಾನ್ ಸಿಟಿಯಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಅಳಿಯ ಪುಂಡಾಟ ಮರೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಜೀವ ಉಳಿಸಲು ಬಳಸುವ ಆಂಬ್ಯುಲೆನ್ಸ್ ಸೈರೆನ್ ಅನ್ನು ಕಾರಿಗೆ ಅಳವಡಿಸಿಕೊಂಡು ನಗರದಲ್ಲಿ ಅಡ್ಡಾಡುವ ಮೂಲಕ ರಾಜಕಾರಣಿಯ ಅಳಿಯ ಹುಂಬತನ ಮೆರದಿದ್ದಾನೆ.
ಪ್ರಭಾವಿ ರಾಜಕಾರಣಿ ಬೇರೆ ಯಾರು ಅಲ್ಲ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ. ಇವರ ಅಳಿಯ ರಾಜೀವ್ ರಾಥೋಡ್ ಎಂಬಾತ ಕಾರಿಗೆ ಸೈರೆನ್ ಅಳವಡಿಸಿಕೊಂಡು ವಿಜಯನಗರದಲ್ಲಿ ನ್ಯೂಸೆನ್ಸ್ ಸೃಷ್ಟಿಸಿಸ್ದಾರೆ.
ಸ್ಯಾಂಡಲ್ವುಡ್ ನಟನೂ ಆಗಿರುವ ರಾಥೋಡ್, ತನ್ನ KA51 MG 9299 ನಂಬರಿನ ಆಡಿ ಕ್ಯೂ 7 ಕಾರಿನಲ್ಲಿ ಆಯಂಬುಲೆನ್ಸ್ ಸೈರನ್ ಹಾಕಿಕೊಂಡು, ಇಷ್ಟಬಂದ ಹಾಗೇ ಓಡಾಡಿ, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿದ್ದಲ್ಲದೆ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ರಾಜೀವ್ ರಾಥೋಡ್ ಅವರಿಂದ ವಿಜಯನಗರ ಸಂಚಾರಿ ಪೊಲೀಸರು ದಂಡ ಕಟ್ಟಿಸಿಕೊಂಡು, ಮತ್ತೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ