Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ ಆದ್ರೆ ಇಲ್ಲಿ ಅತಿಯಾದ ಚಿನ್ನದ ಆಸೆಯಿಂದ ಒಬ್ಬ ಆಸಾಮಿ ಮಕ್ಕಳು ತಿನ್ನುವ ಚಾಕ್ಲೇಟ್ ನಲ್ಲಿ ಚಿನ್ನವನ್ನು ಅಡಗಿಸಿ ಬಚ್ಚಿಟ್ಟು ತಂದಿದ್ದಾನೆ ... ಅದರೆ ಕಸ್ಟಮ್ಸ್ ಅಧಿಕಾರಿಗಳಿಗೆ ತಗಲಾಕೊಂಡು ಈಗ ಜೈಲಿನ ಅತಿಥಿಯಾಗಿದ್ದಾನೆ ...
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಾಕೊಲೇಟ್ನಲ್ಲಿ ಪೇಸ್ಟ್ರೂಪದ ಚಿನ್ನ ಸಾಗಿಸ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಪೇಸ್ಟ್ ರೂಪದ ಚಿನ್ನವನ್ನ ಚಾಕೊಲೇಟ್ನಲ್ಲಿ ಇಟ್ಟು ಸಾಗಿಸಲು ಯತ್ನಿಸಿದ್ದಾನೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.