Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಎಸ್ ಎಂ ಕೃಷ್ಣ ಅಳಿಯ ವಿ.ಜಿ ಸಿದ್ದಾರ್ಥ್ ನಿಗೂಢವಾಗಿ ನಾಪತ್ತೆ

ಮಂಗಳೂರು
ಮಂಗಳೂರು : ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅಳಿಯ, ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ್ ಅವರು ಸೋಮವಾರ ರಾತ್ರಿಯಿಂದ ದಿಢೀರ್ ನಾಪತ್ತೆಯಾಗಿದ್ದಾರೆ.




ಮಂಗಳೂರಿನ ಉಳ್ಳಾಲ ಸಮೀಪದ ನೇತ್ರಾವತಿ ನದಿ ಸೇತುವೆ ಸಮೀಪದಿಂದ ನಿನ್ನೆ ಸಂಜೆ 7 ಗಂಟೆಗೆ ಸಿದ್ದಾರ್ಥ್ ಕಾರು ನಿಲ್ಲಿಸಲು ಹೇಳಿ ಸ್ವಲ್ಪ ದೂರ ನಡೆದುಕೊಂಡು ಹೋದಾಗ ನಾಪತ್ತೆಯಾಗಿದ್ದು, ಬಳಿಕ ಕಾರು ಚಾಲಕ ಫೋನ್ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಆಪ್ತರಲ್ಲಿ ಆತಂಕ ಮನೆಮಾಡಿದೆ.


ನಿನ್ನೆಯಿಂದ ನಾಪತ್ತೆಯಾದ ಸಿದ್ದಾರ್ಥ್ ಅವರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಡಿಸಿ ಶಶಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಗಿದೆ.ಈಗಾಗಲೇ ಪೊಲೀಸರು, ಅಗ್ನಿಶಾಮಕ ದಳ, ಈಜು ತಜ್ಞರಿಂದ ಸಿದ್ದಾರ್ಥ್ ಅವರಿಗಾಗಿ ತೀವ್ರ ಶೋಧ ಮುಂದುವರೆದಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಡಿಸ್ಕವರಿ ಚಾನೆಲ್ ನಲ್ಲಿ ಪ್ರಧಾನಿ ಮೋದಿ ನೋಡಿ ಜನ ಏನೇನು ಕಾಮೆಂಟ್ ಮಾಡಿದ್ರು ಗೊತ್ತಾ?!