Publish Date: Mon, 15 May 2023 (16:21 IST)
Updated Date: Mon, 15 May 2023 (15:53 IST)
ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ಬಳಿ ಮಾತನಾಡಿದ KPCC ಅಧ್ಯಕ್ಷ D.K ಶಿವಕುಮಾರ್, ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತೆ.. ಹೈಕಮಾಂಡ್ ಕೊಡುತ್ತೋ ಬಿಡುತ್ತೋ ಗೊತ್ತಿಲ್ಲ.. ಆದ್ರೆ ರಾಜ್ಯದ ಜನ ನನಗೆ ಗಿಫ್ಟ್ ಕೊಟ್ಟಿದ್ದಾರೆ ಎಂದು ತಿಳಿಸಿದ್ರು.. ಇಂದು ನನ್ನ ಹುಟ್ಟಿದ ಹಬ್ಬ ಇದೆ, ಅಭಿಮಾನಿಗಳು ಬರ್ತಿದ್ದಾರೆ.. ನಾನು ನಂಬಿದ ದೈವ ಭೇಟಿಯಾಗಿ ಆಶೀರ್ವಾದ ಪಡೆಯಬೇಕು.. ನನಗೆ ಕೊಟ್ಟ ಜವಾಬ್ದಾರಿಯನ್ನ ನಿರ್ವಹಣೆ ಮಾಡಿದ್ದೇನೆ.. ಸಭೆಯಲ್ಲಿ ಒಂದು ಸಾಲಿನ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಿಎಂ ಆಯ್ಕೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದೇವೆ ಎಂದು ಹೇಳಿದ್ರು.