Publish Date: Fri, 12 Jun 2020 (22:21 IST)
Updated Date: Fri, 12 Jun 2020 (22:22 IST)
ಮಾರಕ ಕೊರೊನಾ ವೈರಸ್ ಜೈಲು ಸಿಬ್ಬಂದಿಗೆ ತಗುಲಿರುವುದು ದೃಢಪಟ್ಟಿದೆ.
ರಾಮನಗರ ಜಿಲ್ಲಾ ಕಾರಾಗೃಹದ ಮೂವರು ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಮನಗರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15 ಕ್ಕೆ ಏರಿದೆ.
ವಾರದ ಹಿಂದೆ ಶಾನುಭೋಗನಹಳ್ಳಿಯಲ್ಲಿ ವಾಸವಿದ್ದ ಜಿಲ್ಲಾ ಕಾರಾಗೃಹ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢ ಪಟ್ಟಿತ್ತು. ಈತನೊಂದಿಗೆ ಎಣ್ಣೆ ಪಾರ್ಟಿ ನಡೆಸಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಮತ್ತೆ ಇದೀಗ ಈತನ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ಹರಡಿದೆ. ಈ ಸೋಂಕಿತರು ಕ್ವಾರೆಂಟೈನ್ ಕೇಂದ್ರದಲ್ಲಿ ಇದ್ದರು.
ಇದರಲ್ಲಿ ಇಬ್ಬರು ಪುರುಷರು, ಒಬ್ಬರು ಮಹಿಳೆ ಸೇರಿದ್ದಾರೆ. ಕೊರೊನಾ ಧೃಡಪಟ್ಟ ಸೋಂಕಿತರು ಜೈಲಿನ ವಸತಿ ಸಮುಚ್ಛಯದಲ್ಲೇ ಇದ್ದರು. ಕಳೆದ 14 ದಿನಗಳ ಟ್ರಾವೆಲ್ ಹಿಸ್ಟರಿಯಲ್ಲಿ ಇವರು ಎಲ್ಲಿಗೂ ಪ್ರಯಾಣಿಸಿಲ್ಲ. ಶಾನುಭೋಗನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಸೋಂಕಿತ ಜೈಲಿನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನ ಸಂಪರ್ಕದಲ್ಲಿದ್ದ ಮೂವರು ಜೈಲು ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ.