Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಣಿನಾಡಿನಲ್ಲಿ ಶತಕ ದಾಟಿದ ಸೋಂಕಿತರು : 30 ಸಾವಿರ ಕಾರ್ಮಿಕರಿಗೆ ಭೀತಿ

ಗಣಿನಾಡಿನಲ್ಲಿ ಶತಕ ದಾಟಿದ ಸೋಂಕಿತರು : 30 ಸಾವಿರ ಕಾರ್ಮಿಕರಿಗೆ ಭೀತಿ
ಬಳ್ಳಾರಿ , ಗುರುವಾರ, 11 ಜೂನ್ 2020 (16:39 IST)
ಗಣಿನಾಡಿನಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ.

ಮೂವತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯಲ್ಲಿ  ಈ ತಿಂಗಳ ಮೂರರವರೆಗೆ ಒಂದೇ ಒಂದು ಕೊರೊನಾ ಸೋಂಕು ಹೊಂದಿದವರು ಇರಲಿಲ್ಲ. ಆದರೆ ಕಳೆದ ಒಂದು ವಾರದಲ್ಲಿ  ಇಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಮತ್ತು ಅವರ ಸಂಬಂಧಿಕರು ಸೇರಿ 86ಕ್ಕೂ ಹೆಚ್ಚು ಜನರಲ್ಲಿ ಕೋವಿಡ್ -19 ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಂದಾಲ್  ಉಕ್ಕು ಕಾರ್ಖಾನೆಯಲ್ಲಿ ಕೊರೊನಾದ ಅಬ್ಬರ ಹೆಚ್ಚತೊಡಗಿದೆ.

ಜಿಲ್ಲೆಯ 53 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು. ಅವರಲ್ಲಿ 46 ಜನರು  ಜಿಂದಾಲ್ ಸೋಂಕಿತನ ಸಂಪರ್ಕ ಪಡೆದವರಾಗಿದ್ದಾರೆ. ಐದು ಜನರು ಮುಂಬೈನಿಂದ ಬಂದವರಾಗಿದ್ದಾರೆ. ಉಳಿದಂತೆ ಮತ್ತೊಬ್ಬರು ಬಳ್ಳಾರಿಯ ಶ್ರೀ ಸಾಯಿ ನಗರಕ್ಕೆ ಸೇರಿದವರಾಗಿದ್ದಾರೆ. ಮತ್ತೊಬ್ಬರು ಹೊಸಪೇಟೆ ನಗರದವರಾಗಿದ್ದಾರೆ. ಸೋಂಕಿತ ಎಲ್ಲರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ. ಅವರ ಸಂಪರ್ಕಿತರನ್ನು ಹುಡುಕುವ ಕಾರ್ಯ ನಡೆದಿದೆ ಎಂದು ಜಿಲ್ಲಾಧಿಕಾರಿ ನಕುಲ್ ಹೇಳಿದ್ದಾರೆ.

ಜಿಂದಾಲ್ ಕಾರ್ಖಾನೆ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ 10 ಕಂಟೈನ್ ಮೆಂಟ್ ಪ್ರದೇಶಗಳನ್ನು ಸೃಷ್ಟಿ ಮಾಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಿಯುವರೆಗೂ ಆನ್ ಲೈನ್ ಶಿಕ್ಷಣ ರದ್ದುಗೊಳ್ಳಲಿ-ಸಿದ್ದರಾಮಯ್ಯ ಆಗ್ರಹ