Publish Date: Sun, 14 Oct 2018 (16:44 IST)
Updated Date: Sun, 14 Oct 2018 (16:46 IST)
ಬೆಳ್ಳಂಬೆಳ್ಳಗೆ ಕೆರೆಯಲ್ಲಿ ಕಾಡಾನೆಗಳ ಜಲಕ್ರೀಡೆ ಚಿತ್ರಣ ಕಂಡುಬಂದಿದೆ.
ರಾಮನಗರದ ಕೋಡಂಬಳ್ಳಿ ಗ್ರಾಮದ ಕೆರೆಯಲ್ಲಿ ಆಟವಾಡುತ್ತಿರುವ 4 ಕಾಡಾನೆಗಳು ಜನರ ಗಮನ ಸೆಳೆದಿವೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಕೆರೆಯಲ್ಲಿ ಕಾಡಾನೆಗಳು ಜಲಕ್ರೀಡೆಯಲ್ಲಿ ತೊಡಗಿದ್ದವು.
ರಾತ್ರಿ ಪೂರ ಕೆರೆಯಲ್ಲಿಯೇ ಇದ್ದು ಬೆಳಗ್ಗೆಯಾಗುತ್ತಿದ್ದಂತೆ ಮತ್ತೆ ಕಾಡಿನತ್ತ ಮುಖಮಾಡಿದ ಗಜಪಡೆ.
ಕಬ್ಬಾಳು ಅರಣ್ಯದಿಂದ ಬಂದಿರುವ ಕಾಡಾನೆಗಳ ತಂಡ ಇದಾಗಿದೆ. ನೀರು ಕುಡಿಯಲು ಬಂದು ಮತ್ತೆ ಕಾಡಾನೆಗಳು ವಾಪಸ್ ಆಗಿವೆ.