Webdunia - Bharat's app for daily news and videos

Install App

ಕೊಡಗಿನಲ್ಲಿ ಬೆಳಂ ಬೆಳ್ಳಗೆ ಆನೆ ದಾಳಿ

Webdunia
ಶನಿವಾರ, 11 ಜೂನ್ 2022 (19:57 IST)
ಕೊಡಗು ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಮುಂದುವರೆದಿದ್ದು ಆನೆದಾಳಿಗೆ  ಓರ್ವ ಬಲಿಯಾಗಿದ್ದಾನೆ. ಜಿಲ್ಲೆಯಲ್ಲಿ  ಆನೆದಾಳಿಯಿಂದ ಭಯದಲ್ಲಿ ಜೀವನ ನಡೆಸುತ್ತಿದ್ದು 
 ಕಾಡುಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಕೊನೆಗಾಣಿಸುವಂತೆ  ಹಾಗೂ ಆನೆಗಳನ್ನ ಕಾಡಿಗೆ ಓಡಿದುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಮತ್ತು ರೈತ ಸಂಘ ಒತ್ತಾಯಿಸಿ ಆರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗಿನಲ್ಲಿ ಬೆಳಂ ಬೆಳ್ಳಗೆ ಆನೆ ದಾಳಿ, ಆನೆದಾಳಿಯಿಂದ ಬೈಕ್ ಸವಾರ ದುರ್ಮರಣ, ಆನೆಗಳನ್ನು ಕಾಡಿಗೆ ಅಟ್ಟುವಂತೆ ರೈತ ಸಂಘ ಒತ್ತಾಯ.
ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜನತೆ ಜೀವನ ಸಾಗಿಸೋದೆ ಕಷ್ಟಕರವಾಗಿ ಬಿಟ್ಟಿದ್ದೆ. ಬೆಳಗಾದ್ರೆ ಸಾಕು ಆನೆಹಾವಳಿ ಹುಲಿ ಹಾವಳಿಯಿಂದ ಜಿಲ್ಲೆಯ ಜನತೆ ರೋಸಿ ಹೋಗಿದ್ದಾರೆ. ಜಿಲ್ಲೆಯಲ್ಲಿ  ರೈತರು ಬೆಳೆದ ಬೆಳೆಗಳನ್ನು ನಾಶ ಮಾಡೊ ಕಾಡು ಪ್ರಾಣಿಗಳು ಇತ್ತ ಸರಿಯಾದ ಫಸಲು ಇಲ್ಲದೆ ರೈತರು ಕಂಗಾಲಾಗಿ ಹೋಗಿದ್ದಾರೆ. ದಕ್ಷಿಣ ಕೊಡಗಿನಲ್ಲಂತು ಆನೆ ಹಾವಳಿ ಮಿತಿ ಮೀರಿದ್ದು ಮನುಷ್ಯರನ್ನು ಬಲಿ ಪಡೆದುಕೊಳ್ಳುತ್ತಲೆ ಇದೆ. ನಿನ್ನೆ ದಿನ ಕೂಡ  ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಎಂಬಲ್ಲಿ ತೋಟಕ್ಕೆ ಹೋಗು ಸಂದರ್ಬದಲ್ಲಿ   58 ವರ್ಷದ ಹಾಲಪ್ಪ ಎಂಬುವರ ಮೇಲೆ ಆನೆ ದಾಳಿ ನಡೆಸಿದೆ. ಅದೃಷ್ಟವಶಾತ್ ಹಾಲಪ್ಪ ಪ್ರಾಣಪಾಯದಿಂದ ಪಾರಾಗಿದ್ದು ಮಡಿಕೇರಿಯ  ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಒಂದು ಘಟನೆ ಮಾಸೊ 24  ಮುಂಚಿತವಾಗಿ ಇಂದು ಮುಂಜಾನೆ ಕೂಡ ಆನೆ ದಾಳಿಯಾಗಿದ್ದು ಓರ್ವನನ್ನ ಬಲಿ ಪಡೆದುಕೊಂಡಿದೆ. ಜಿಲ್ಲೆಯ  ಗೋಣಿಕೊಪ್ಪ ಸಮೀಪದ ದನುಗಾಲ ಮಾರಮ್ಮ ಕಾಲೋನಿ ನಿವಾಸಿ  50 ವರ್ಷ ಪ್ರಾಯದ  ಚಾಮ‌  ಎಂಬುವರ ಮೆಲೆ ಕಾಡಾನೆ ದಾಳಿ‌ ನಡೆಸಿದ್ದು ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.  ಕೋಣನ ಕಟ್ಟೆಯಿಂದ ಮೂವರು ಯುವಕರು‌ ಮರಪಾಲ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುವಾಗ ಪಕ್ಕದ ಕಾಫಿ ತೋಟದಿಂದ ಬಂದ ಕಾಡಾನೆ ಬೈಕ್ ಸವಾರರ ಮೇಲೆ ದಾಳಿ ಮಾಡಿದೆ. ಮುಂಜಾನೆ ಹೊತ್ತಿ ನಲ್ಲಿ ದೇವಸ್ಥಾನಕ್ಕೆ ತೆರಳಿ ವಾಪ್ಪಸ್ಸು ಬರುತ್ತಿದ್ದ ವೇಳೆಬೈಕ್ ನಲ್ಲಿ ತೆರಳುತ್ತಿದ್ದ ಮೂವರಲ್ಲಿ ಒಬ್ಬನನ್ನು ಆನೆ ದಾಳಿಮಾಡಿ ಕೆಳಗೆ ಬೀಳಿಸಿ ತುಳಿದು ಸಾಯುಸಿದ್ರೆ  ಇಬ್ಬರು ಯುವಕರು ಬೈಕ್ ನಲ್ಲಿ ಮುಂದೆಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. 
ಕಾಡಾನೆ ಆವಳಿಗೆ ಬೇಸತ್ತ ಸ್ಥಳೀಯರು ಮತ್ತು ರೈತರು
  ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ದಕ್ಷಿಣ ಕೊಡಗಿನಲ್ಲಿ ಆಗಿಂದಾಗ್ಗೆ ಕಾಡಾನೆ ಸೇರಿದಂತೆ ಕಾಡುಪಾಣಿಗಳ ಉಪಟಳ ಮಿತಿ ಮೀರಿದ್ದು ಸೂಕ್ತ ರೀತಿಯಲ್ಲಿ ಕ್ರಮ ವಹಿಸುವಂತೆ ಆಗ್ರಹಿಸಿದರು. ಗೋಣಿಕೊಪ್ಪ ಪೊನ್ನಂಪೇಟೆ ಸುತ್ತಮುತ್ತಲಿನ ತೋಟಗಳಲ್ಲಿ  ಸಾಕಷ್ಟು ಕಾಡಾನೆಗಳು ಬೀಡು ಬಿಟ್ಟಿದ್ದು ಅವುಗಳನ್ನ ಶೀಘ್ರವಾಗಿ ಕಾಡಿಗೆ ಓಡಿಸುವಂತೆ ಆಗ್ರಹಿಸಿದ್ರು‌.
ಈ ಭಾಗದಲ್ಲಿ ಕಾಡಾನೆಗಳು ಕಾಡಾನಲ್ಲಿ ಇರುವುದಕಿಂತ ಕಾಫಿತೋಟದಲ್ಲಿ ಬೀಡುಬಿಟ್ಟಿದ್ದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಅಲ್ಲದೆ ಬೆಳೆನಾಶಮಾಡುತ್ತಿದ್ದು ಜೀವನ ನಟೆಸುವುದೇ ಕಷ್ಟ ವಾಗಿದೆ ಎಂದು ಸ್ಥಳೀಯರು ಆಕ್ರೋಶ ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಆನೆ ಮಾನವ ಸಂಘರ್ಷ ಮುದುಂದುವರಿಯುತ್ತಲೆ ಇದ್ದು ಮನುಷ್ಯನ ಪ್ರಾಣಕ್ಕೆ ಕುತ್ತು ತರುತ್ತಲೆ ಇದೆ. ಕಾಡಾನೆ ದಾಳಿಯಾದ ಸಂದರ್ಬದಲ್ಲಿ  ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡೋದು  ಪರಿಹಾರ ನೀಡೋದು ಇಷ್ಟೇ . 
ಕಾಡಾನೆಗಳ ಹಾವಳಿಯಿಂದ ರೈತರಿಗೆ ಶಾಶ್ವತ ಪರಿಹಾರ ಅನ್ನೋದು ಮಾತ್ರ ಮರಿಚಿಕೆಯಾಗಿಯೇ ಉಳಿದೆ ಹೊರತು ಶಾಶ್ವತ ಪರಿಹಾರ ಮಾತ್ರ ಇಲ್ಲಿಯವರೆಗೆ ದೊರೆತ್ತಿಲ್ಲ ಸ್ಥಳಿಯ ನೋವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments