ಸರ್ವಿಸ್ ಬಿಲ್ ಕೂಡ ಗ್ರಾಹಕರ ಬಳಿ ಬಲವಂತಾಗಿ ತೆಗೆದುಕೊಳ್ಳುವುದಿಲ್ಲ ಅಂತಾ ನಿರ್ಧಾರ ತೆಗೆದುಕೊಂಡಿದ್ದಾರೆ.ಹೌದು, ಮೊನ್ನೆ ತಾನೇ ಕನ್ಸುಮರ್ ಕೋರ್ಟ್ ಸರ್ವಿಸ್ ಬಿಲ್ ಗ್ರಾಹಕರ ಬಳಿ ತೆಗೆದುಕೊಳ್ಳಬಾರದೆಂದು ಹೇಳಿದೆ. ಆದ್ರೆ ಅಧಿಕೃತವಾಗಿ ಕಾನೂನಾತ್ಮಕವಾಗಿ ಆದೇಶ ಮಾಡಿಲ್ಲ. ಆದ್ರು ನಗರದಲ್ಲಿ ಕೆಲವೊಂದು ಹೊಟೇಲ್ ಗಳು ಮಾತ್ರ ಅಂದ್ರೆ ಶೇ 5-6 ರಷ್ಟು ಸರ್ವಿಸ್ ಬಿಲ್ ತೆಗೆದುಕೊಳ್ತಿದ್ದಾರೆ .ಆದ್ರೆ ಬಹುತೇಕ ಹೊಟೇಲ್ ಗಳು ಗ್ರಾಹಕರ ಬಳಿ ಸರ್ವಿಸ್ ಬಿಲ್ ತೆಗೆದುಕೊಳ್ತಿಲ್ಲ.ಹಾಗೆ ಸರ್ವಿಸ್ ಬಿಲ್ ಬಲವಂತವಾಗಿ ಗ್ರಾಹಕರ ಬಳಿ ತೆಗೆದುಕೊಳ್ಳುವಾಗಿಲ್ಲ. ಗ್ರಾಹಕರಾಗೆ ಸರ್ವಿಸ್ ಬಿಲ್ ಕೊಟ್ರೆ ತೆಗೆದುಕೊಳ್ಳಬಹುದು. ಆದ್ರೆ ಗ್ರಾಹಕರ ಮೇಲೆ ಒತ್ತಡ ಹೇರುವಾಗಿಲ್ಲ. ಕಾನೂನಾತ್ಮಕವಾಗಿ ಸರ್ವಿಸ್ ಬಿಲ್ ತೆಗೆದುಕೊಳ್ಳಿ ಅಂತಾ ಆದೇಶ ಮಾಡುವವರೆಗೂ ನಾವು ತೆಗೆದುಕೊಳ್ಳುವುದಿಲ್ಲ ಅಂತಾ ಹೊಟೇಲ್ ಮಾಲೀಕರ ಸಂಘದ ಪಿಸಿ ರಾವ್ ಹೇಳಿದ್ದಾರೆ.