ಬಿಎಂಟಿಸಿ ನೌಕರರ ಉದ್ಯೋಗ ಕಸಿದುಕೊಂಡ ಎಲೆಕ್ಟ್ರಾನಿಕ್ ಬಸ್ ಗಳು

Webdunia
ಬುಧವಾರ, 27 ಅಕ್ಟೋಬರ್ 2021 (20:29 IST)
ಬೆಂಗಳೂರು: ಮುಷ್ಕರ, ಲಾಕ್ ಡೌನ್ ಬಳಿಕ ಈಗಷ್ಟೇ ಡ್ಯೂಟಿಗೆ ಹಾಜರಾಗಿರುವ ಬಿಎಂಟಿಸಿ ಡ್ರೈವರ್ ಗಳ ಪಾಲಿಗೆ ಎಲೆಕ್ಟ್ರಿಕ್ ಬಸ್ ಗಳು ಕಂಟಕವಾಗಿದೆ. ಎಲೆಕ್ಟ್ರಿಕ್ ಬಸ್ ಗಳ ಓಡಾಟ ಶುರುವಾದ ಬೆನ್ನಲ್ಲೇ ಬಿಎಂಟಿಸಿ ಡ್ರೈವರ್ ಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ.
 
 
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್ ಬಸ್ ಗಳು ನಗರದಲ್ಲಿ ಸಂಚಾರ ನಡೆಸಲಿದೆ. ಆದರೆ ಖಾಸಗಿ ಸಂಸ್ಥೆಯಿಂದ ಗುತ್ತಿಗೆ ಆಧಾರದಲ್ಲಿ ಸಂಚಾರ ನಡೆಸುತ್ತಿರುವ ಬಸ್ ಗಳಿಗೆ ಖಾಸಗಿ ಸಂಸ್ಥೆಯವರೇ ಡ್ರೈವರ್ ನನ್ನು ನೇಮಕ ಮಾಡಿರುವುದರಿಂದ ಬಿಎಂಟಿಸಿ ಚಾಲಕರಿಗೆ ಕೆಲಸ ಇಲ್ಲದಂತಾಗಿದೆ.
 
NTPC ವಿದ್ಯುತ್ ವ್ಯಾಪಾರ್ ನಿಗಮ ಲಿ.ನಿಂದ ಚಾಲನೆಯಾಗುತ್ತಿರುವ ಎಲೆಕ್ಟ್ರಿಕ್ ಬಸ್ ಗಳಲ್ಲಿ ಕಂಡಕ್ಟರ್ ಮಾತ್ರ ಬಿಎಂಟಿಸಿಯವರಾಗಿದ್ದು ಡ್ರೈವರ್ ಗಳು ಖಾಸಗಿಯವರು. ಹೀಗಾಗಿ ಬಿಎಂಟಿಸಿ ಡ್ರೈವರ್ ಗಳಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಪ್ರತಿ ಡಿಪೋದಲ್ಲಿನ 80 ಡ್ರೈವರ್ ಗಳನ್ನು ಇತರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ.
 
ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿರುವ ಬಿಎಂಟಿಸಿ, ಘಟಕ 8, 37 ಮತ್ತು 29ರಲ್ಲಿನ ಚಾಲಕರನ್ನು ಬೇರೆ ಘಟಕಕ್ಕೆ ನಿಯೋಜಿಸುವಂತೆ ಆದೇಶಿಸಲಾಗಿದೆ.
 
ಸದ್ಯಕ್ಕೆ ಮೂರು ಘಟಕಗಳ ಚಾಲಕರನ್ನು ಮಾತ್ರ ವರ್ಗ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಾದಾಗ ಚಾಲಕರನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಇನ್ನು ಕೆಲವೇ ವರ್ಷದಲ್ಲಿ ಬಿಎಂಟಿಸಿ ಇತಿಹಾಸದ ಪುಟ ಸೇರಲಿದ್ದು ಖಾಸಗಿಯವರ ಆಟ ಶುರುವಾಗಲಿದೆ ಎಂದೇ ಹೇಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿನ್ ಜೊತೆ ಮಲ್ಕೋಬೇಕಾ ನಾನು... ಎನ್ನುತ್ತಾ ಮಂಚಕ್ಕೆ ಕರೆಯುತ್ತಿದ್ದ ಕಾಮಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ Video

ಕರ್ನಾಟಕದಲ್ಲಿ ಇಂದಿನಿಂದ ಮತಪರಿಷ್ಕರಣೆ: ಜನರಿಗೆ ಮಹತ್ವದ ಮಾಹಿತಿ ನೀಡಿದ ಸಿಎಂ ಡಿಕೆ ಶಿವಕುಮಾರ್

ಕಿಕ್ ಔಟ್ ಮಾಡಿ ಎನ್ನುವಂತಹ ತಪ್ಪು ನಾನೇನು ಮಾಡಿದ್ದೆ.. ಸದಾನಂದ ಗೌಡರ ಬಗ್ಗೆ ವಿಜಯೇಂದ್ರಗೆ ಭಾರೀ ಬೇಸರ

Arunachal Pradesh: ಇಡೀ ಬೆಟ್ಟವೇ ಕುಸಿದು ಬೀಳುತ್ತಿದ್ದರೂ ಪವಾಡಸದೃಶವಾಗಿ ಬದುಕುಳಿದ ವ್ಯಕ್ತಿ: ಮೈ ಜುಮ್ ಎನಿಸುವ ವಿಡಿಯೋ

ಗಂಡನಿಂದ ಹೆಚ್ಚು ಸಂಬಳ ಹೆಂಡತಿಗಿರುವಾಗ ಜೀವನಾಂಶ ಯಾಕೆ ಬೇಕು: ಹೈಕೋರ್ಟ್ ಮಹತ್ವದ ತೀರ್ಪಿಗೆ ಪುರುಷರ ಬಹುಪರಾಕ್

ಮುಂದಿನ ಸುದ್ದಿ
Show comments