Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಿ.ಯು ಪರೀಕ್ಷೆ ರದ್ದಾದ ನಂತರ ಪೋಷಕರು, ಮಕ್ಕಳಲ್ಲಿ ಇನ್ನೊಂದು ರೀತಿಯ ಭವಿಷ್ಯದ ಬಗೆಗೆ ಆತಂಕ

ಪಿ.ಯು ಪರೀಕ್ಷೆ ರದ್ದಾದ ನಂತರ ಪೋಷಕರು, ಮಕ್ಕಳಲ್ಲಿ ಇನ್ನೊಂದು ರೀತಿಯ ಭವಿಷ್ಯದ ಬಗೆಗೆ ಆತಂಕ
bangalore , ಶನಿವಾರ, 10 ಜುಲೈ 2021 (18:51 IST)
ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪಾಸ್ ಮಾಡುವ ಬಗೆಗೆ ರಾಜ್ಯ ಸರ್ಕಾರದಿಂದ ಆದೇಶ ಹೊರಬಿದಿದ್ದು, ಪರೀಕ್ಷೆ  ಮಾಡದಿರಲು ನಿರ್ಧರಿಸಲಾಗಿದೆ, ಮಾರಕವೂ ಪೂರಕವೂ ಹೌದು ಎಂದು ಜನಾಭಿಪ್ರಯ ವ್ಯಕ್ತವಾಗಿತ್ತು. ಒಂದು ಕಡೆ ನೋಡುವುದರರೆ ಜನರು ಕೋವಿಡ್ ರೋಗದಿಂದ ತತ್ತರಿಸಿ ಹೋಗಿದ್ದಾರೆ. ಪೋಷಕರು, ಮಕ್ಕಳಲ್ಲಿ ಕೂಡ ಆತಂಕ ಇನ್ನೊಂದು ರೀತಿಯಲ್ಲಿ ಕವಿದಿದೆ.   
 
ಈ ಬಗ್ಗೆ ಶಿಕ್ಷಣ ತಜ್ಞ ಸುಪ್ರೀತ್ ನಮ್ಮ ಜೊತೆ ಮಾತನಾಡಿ ಪರೀಕ್ಷೆ ಇದೆಯೋ ಇಲ್ಲವೋ ಎಂದು ಸಾಕಷ್ಟು ಗೊಂದಲ ಏರ್ಪಟ್ಟಿತ್ತು, ಇತ್ತೀಚಿಗೆ ಪರೀಕ್ಷೆಗಳು ಬೇಡ ಎಂದು ಸ್ಪಷ್ಟ ನಿರ್ಧಾರ ಕೈಗೊಂಡು ಗೊಂದಲಕ್ಕೆ ತೆರೆ ಬಿದಿದ್ದು, ಒಂದು ನಿರ್ದಿಷ್ಟವಾದ ನಿಲುವಿಗೆ ಬರಲಾಗಿದೆ, ಗೊಂದಲವಂತು ನಿವಾರಣೆ ಆದ ಹಾಗಾಗಿದೆ ಆದರೆ ಎಲ್ಲೊ ಒಂದು ಕಡೆ ಪೋಷಕರು ಮತ್ತು ಮಕ್ಕಳಲ್ಲಿ, ಪರೀಕ್ಷೆ ಇಲ್ಲದಿರುವುದು ಮಾರಕವಾಗಬಹುದು ಎಂಬ ಅಂತಕ ಕೂಡ ಎದುರಾಗಿದೆ, ಮುಂದಿನ  ಓದಿಗೆ ತಂದರೆಯಾಗಬಹುದು ಎಂದು ಕೂಡ ಯೋಚಿಸುತ್ತಿದ್ದಾರೆ ಎಂದು ಹೇಳಿದರು. 
 
ಪಿಯು ಪರೀಕ್ಷೆ ಬರೆಯುವರು ಕನಿಷ್ಠ ಆರು ಮುಕ್ಕಾಲು ಲಕ್ಷ, ಮತ್ತೆ ಪುನರಾವರ್ತಿತ ಅಭ್ಯರ್ಥಿಗಳು ಸೇರಿ ಏಳುವರೆ ಲಕ್ಷ ಜನರು ಈ ಬಾರಿ ಹೊರಬರುತ್ತಿದ್ದಾರೆ, ಉನ್ನತ ಶಿಕ್ಷಣ ಸಂಸ್ಥೆಗಲ್ಲಲ್ಲಿ ಎಲ್ಲಾ ಸೀಟ್ ಭರ್ತಿಯಾಗಿ ಇನ್ನಷ್ಟು ಡಿಮ್ಯಾಂಡ್ ಏರ್ಪಾಡಾಗುವ  ಸಾಧ್ಯತೆ ಇದೆ, ಪ್ರವೇಶ ಪರೀಕ್ಷೆ ಮಾಡುವುದರ ಮೂಲಕ ಮೆರಿಟ್ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕಾದ ಅನಿವಾರ್ಯತೆ ಕೂಡ ಎದುರಾಗಿದೆ,  ಈ ಬಗ್ಗೆ ಇಲಾಖೆ, ಅಧಿಕಾರಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಸಂಬಂಧ ಪಟ್ಟ ಸಚಿವರು ಗಮನ ಹರಿಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. 
 
ಎಸ್.ಎಸ್.ಎಸ್.ಎಲ್ ಸಿ ಪರೀಕ್ಷೆಯಿಂದ ಶೇ 45  ಪ್ರಥಮ ಪಿ.ಯು ಪಾರೀಏಕ್ಷೆಯಿಂದ ಶೇ 45 ಮತ್ತು ಶೇ 10  ರಷ್ಟು ಆಂತರಿಕ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಸಾರ್ವತ್ರಿಕವಾಗಿ ಒಪ್ಪುವಂತಿದ್ದರೂ, ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗುತ್ತಿದೆ.  10 ನೇ ತರಗತಿಯಲ್ಲಿ ಪರೀಕ್ಷೆ ಬರೆದು ಪಾಸ್ ಮಾಡಿರುತ್ತಾರೆ, ಆದರೆ ದ್ವೀತಿಯ ಪಿ.ಯು ವಿಷಯಕ್ಕೆ ಬರುವುದಾದರೆ ದ್ವಿತೀಯ ಪಿ.ಯು ನಲ್ಲಿ ಅತಿ ಹೆಚ್ಚು ಅಂಕ ತಗೆದುಕೊಂಡ ಮಕ್ಕಳು ಹಿಂದಿನ ವಷಗಳಲ್ಲಿ ಪ್ರಥಮ ವರ್ಷಕ್ಕೆ ಅಷ್ಟು ಪ್ರಾಮುಖ್ಯತೆ ನೀಡಿರುವುದಿಲ್ಲ, ಮೊದಲ ಆದ್ಯತೆ ಅವರದು ಎರಡನೆಯ ವರ್ಷವೇ ಆಗಿರುತ್ತದೆ. ಶೇ 45 ರಷ್ಟು ಪ್ರಥಮ ಪಿ.ಯು ಪರೀಕ್ಷೆಗೆ ಕೊಟ್ಟಿರುವುದು ಅಷ್ಟು ಸಮಂಜಸವಲ್ಲ ಎಂದು ನನಗನ್ನಿಸುತ್ತದೆ ಎಂದು ಹೇಳಿದರು.
 
ಶೇ 20 ರಷ್ಟು ಅಂಕಗಳನ್ನು ಮಾತ್ರ ಪರಿಗಣಿಸಿದ್ದರೆ ಸಮಂಜಸವಾಗುತ್ತಿತ್ತು, ಮಿಕ್ಕಿದ ಎಲ್ಲಾ ಅಂಕಗಳನ್ನು ಆಂತರಿಕ ಮೌಲ್ಯಮಾಪನದಿಂದ ತೆಗೆದುಕೊಂಡಿದ್ದರೆ ಚೆನ್ನಾಗಿರುತಿತ್ತು. ಒಟ್ಟಾರೆಯಾಗಿ ಸರ್ಕಾರ ಒಂದು ನ್ಯಾಯಯುತ ತೀರ್ಮಾನಕ್ಕೆ ಬಂದಿದೆ, ಸಾರ್ವಜನಿಕರು ಕೂಡ ಒಪ್ಪಿದ್ದಾರೆ, ಮಕ್ಕಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪುನರಾವರ್ತಿತ ಅಭ್ಯರ್ಥಿಗಳನ್ನು ಸಹ ಪಾಸ್ ಮಾಡುವ ಈ ಸುಸಂದರ್ಭದಲ್ಲಿ,  ಕರ್ನಾಟಕ ರಾಜ್ಯದ ಮೌಲ್ಯಯುತ ಶಿಕ್ಷಣ, ತಜ್ಞರಿಗೆ ಒಂದು ಸವಾಲಿನ ಕೆಲಸವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ವಿಶ್ವವಿದ್ಯಾನಿಲಯಗಳು ಸಹ ರಾಷ್ಟ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕಿರುವುದರಿದ, ಪಠ್ಯಕ್ರಮದಲ್ಲಿ ಸ್ಪರ್ಧಾತ್ಮಕ ಮೋನೋಭಾವ ಬೆಳಸುವ ಕೆಲಸವಾಗಬೇಕು ಎಂದು ತಿಳಿಸಿದರು.       
 
ಅತ್ಯುತ್ತಮ ವಿದ್ಯಾರ್ಥಿಗಳನ್ನು ತಯಾರಿಸುವುದರಲ್ಲಿ , ರಾಜ್ಯದ ರಾಷ್ಟ್ರದ ವಿಶ್ವವಿದ್ಯಾನಿಲಯಗಳು ಕೆಲಸ ಮಾಡಬೇಕಾಗುತ್ತದೆ, ಈ ವಿಷಯವಾಗಿ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾನಿಲಯಗಳು ಕೂಲಂಕುಷವಾಗಿ ಶಿಕ್ಷಣ ತಜ್ಞರೊಂದಿಗೆ ಚರ್ಚೆ ಮಾಡಬೇಕು, ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಯಾವುದೇ ಆಲೋಚನೆ ಮಾಡದೇ, ಸಮತೋಲನದಿಂದ  ಸರಕಾರ ವಿದ್ಯಾರ್ಥಿಗಳಿಗೆ ನಾಯ್ಯ  ದೊರಕಿಸಿಕೊಡಬೇಕಿದೆ ಎಂದು ಶಿಕ್ಷಣ ತಜ್ಞ ಸುಪ್ರೀತ್ ಹೇಳಿದರು . 
 
ಮೊತ್ತಬ್ಬ ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಅಭಿಪ್ರಯ ವ್ಯಥಪಡಿಸಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಕರಣ ಕಳೆದ ಒಂದು ವರ್ಷದಿಂದ ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನೆಡೆದಿಲ್ಲ. ಆನ್ಲೈನ್ ತರಗತಿಗಳು ಎಷ್ಟರ ಮಟ್ಟಿಗೆ ನೆಡಯುತ್ತವೆ ಎಂದು  ಅನುಮಾನವಿದೆ, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಹಣದಾಸೆಗೆ ನೆಡೆಸುತ್ತಿದ್ದು, ಆದರೆ ಸರ್ಕಾರೀ ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿಯ ವರ್ಚುಯಲ್ ಕ್ಲಾಸ್ ನೆಡೆಸಿಲ್ಲ, ಶೇ 40 ರಷ್ಟು ವಿದ್ಯಾರ್ಥಿಗಳಿಗೆ ಕಲಿಕೆಯೇ ಆಗಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಶೇ 30 ರಷ್ಟು ಜನಕ್ಕೆ ಇಂಟರ್ನೆಟ್ ಸೌಲಭವೆ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.  
 
ಇಂಟರ್ನೆಟ್ ಇದ್ದರೆ ಸಾಲದು, ಅದು ಎಲ್ಲಾ ಸಮಯದ್ಲಲೂ ಕಾರ್ಯನಿರ್ವಹಿಸಬೇಕು, ಸಾಮಾನ್ಯ ವರ್ಗಕ್ಕೆ ಶೇ 7 ರಷ್ಟು   ಮೊಬೈಲ್ ಮತ್ತು ಪರಿಶಿಷ್ಟ ಜಾತಿ ಪಂಗಡಗಳ ಮಕ್ಕಳು ಶೇ 3 ರಷ್ಟು ಮೊಬೈಲ್ ಲ್ಯಾಪ್ಟಾಪ್ ಬಳಸುತ್ತಾರೆ ಎಂದು ಹೇಳಲಾಗುತ್ತಿದೆ ಹೀಗಿರುವ ಸಮಯದಲ್ಲಿ ಪಿ.ಯು ಪರೀಕ್ಷೆಯನ್ನು ಅಳೆದು ತೂಗಿ ರದ್ದುಪಡಿಸಲಾಗಿದೆ, ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆಯಿಂದ ವಿನಾಯಿತಿ ನೀಡಿ ಪಾಸ್ ಮಾಡಲಾಗುತ್ತಿದೆ. ಪರೀಕ್ಷೆ ರದ್ದು ಪಡಿಸಿರುವುದು ಮಾರಕ  ಎಂದು ವಿಚಾರ ಮಾಡಿದರೆ, ಹೌದು ಎನ್ನುವ ಉತ್ತರ ಬರುತ್ತದೆ, ಕಲಿಕೆ ಇಲ್ಲದೆ ಹೋದರೆ ಕಷ್ಟವಾಗುವುದಂತೂ ನಿಜ ಅದರಲ್ಲಿ ಯಾವುದೇ ಅನುಮಾನವಿಲ್ಲಾ ಎಂದು ಅನ್ನಿಸುತ್ತದೆ. ಪದವಿ ತರಗತಿಗಳಿಗೆ ಹೋದರೆ ತುಂಬಾ ಕಷ್ಟವಾಗುತ್ತದೆ ಆದರೆ ಕೋವಿಡ್ ಸಾಂಕ್ರಾಮಿಕ ರೋಗ ವಿರುವುದರಿಂದ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ, ಕ್ಲಾಸ್ ರೂಮ್ ಪರೀಕ್ಷೆಗಳನ್ನಾದ್ರೂ ನೆಡೆಸಬೇಕು ಎಂದು ಅಭಿಪ್ರಾಯಪಟ್ಟರು.
 
ಈಗ ಇಂದುವರೆ ವರ್ಷ ಮಕ್ಕಳು ರೂಮ್ ನಲ್ಲಿ ಕುಳಿತಿದ್ದಾರೆ ಎಂದು ನಾನು ಒಪ್ಪಲು ತಯಾರಿಲ್ಲ, ಶಿಕ್ಷಣ ತಜ್ಞರ ಅಭಿಪ್ರಾಯ ತೆಗೆದುಕೊಳ್ಳುವುದಾದರೆ ಪರೀಕ್ಷೆ ತರಗತಿ ಈ ನಂತರ ನೆಡೆಸುವುದು ಸೂಕ್ತ,  ಈ ನಿರ್ಧಾರದಿಂದ  ನೇರವಾಗಿ ಪದವಿ ತರಗತಿಗಳಲ್ಲಿ ಪಠ್ಯಕ್ರಮ ಹೇರಲು ಆಗುವುದಿಲ್ಲ. ಅನಿವಾರ್ಯ ಪರಿಸ್ಥಿತಿ ಇದ್ದರೂ ಆನ್ಲೈನ್ ಶಿಕ್ಷಣವನ್ನು ಮುಂದುವರೆಸಬಾರದು, ಹೀಗೆ ಮುಂದುವರೆದರೆ ಬಹು ದೊಡ್ಡ ಶೈಕ್ಷಣಿಕ ದುರಂತಕ್ಕೆ ಕಾರಣವಾಗುತ್ತದೆ ಎಂದರು. 
 
ಒಟ್ಟಿನಲ್ಲಿ ಹೇಳುವುದಾರೆ ಪರೀಕ್ಷೆ ನೆಡಿಸದಿರುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ತೊಂದರೆ ಆಗುವುದಂತೂ ನಿಜ, ಇನ್ನೂ ಕಾಲ ಮಿಂಚಿಲ್ಲದಿರುವುದರಿಂದ ಉತ್ತಮ ಮಟ್ಟದ ಭೋಧನೆ ಕಲಿಕೆಯನ್ನು ಮಾಡಿಕೊಡಬೇಕು ಎಂದು ವಿನಂತಿಸುತ್ತೇನೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಕಾಳಗ