ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸುತ್ತಿರೋ ಇಡಿ ಅಧಿಕಾರಿಗಳು...!

Webdunia
ಶನಿವಾರ, 4 ಫೆಬ್ರವರಿ 2023 (14:51 IST)
ಕಳೆದ  ೨೦ ದಿನದಿಂದ ಬಿಬಿಎಂಪಿಯ ಹಲವು ಇಂಜಿನಿಯರ್ ಗಳ ವಿಚಾರಣೆಯನ್ನ ಇಡಿ ಅಧಿಕಾರಿಗಳು ನಡೆಸ್ತಿದ್ದಾರೆ.ಕೋಟ್ಯಂತರ ರೂಪಾಯಿ ಹಗರಣದ ಬಗ್ಗೆ ಇಂಚಿಂಚು ಮಾಹಿತಿಯನ್ನ  ಇಡಿ ಅಧಿಕಾರಿಗಳು ಪಡೆಯುತ್ತಿದ್ದಾರೆ.ಕೊಳವೆಬಾವಿ ಹಾಗು ಆರ್ಓ ಪ್ಲಾಂಟ್ ಪ್ರಕರಣ 969 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ವರ್ಗ ಭಾಗಿಯಾಗಿದ್ದಾರೆ.ತಪ್ಪು ಲೆಕ್ಕ ತೋರಿಸುವಲ್ಲಿ  ಅಧಿಕಾರಿ ಸಿಬ್ಬಂದಿ ವರ್ಗ ಯಶಸ್ವಿಯಾಗಿದ್ದಾರೆ.
 
ಈಗ ಬಿಬಿಎಂಪಿಯ ಹಣಕಾಸು ವಿಭಾಗಕ್ಕೆ ಇಡಿ ನೋಟೀಸ್ ನೀಡಿದೆ.ಬಿಬಿಎಂಪಿಯ ಹಣಕಾಸು ಇಲಾಖೆಗೆ ಇಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.ಇದೆ ತಿಂಗಳ ೭ ರಂದು ಬೆಂಗಳೂರಿನ ಇಡಿ ಕಛೇರಿಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟೀಸ್ ನಲ್ಲಿ ಉಲ್ಲೇಖ ಮಾಡಲಾಗಿದೆ.ಅಲ್ಲದೇ ನೋಟೀಸ್ನಲ್ಲಿ ಕೆಲ ಪ್ರಶ್ನೆಗಳನ್ನೂ ಇಡಿ ಅಧಿಕಾರಿಗಳು ಕೇಳಿದ್ದಾರೆ.ಕಳೆದ 2016 ರಿಂದ 2019 ರವರೆಗೆ ಕೊಳವೆ ಬಾವಿ ಹಾಗೂ ಅರ್.ಓ ಪ್ಲಾಂಟ್ ಗೆ ಎಷ್ಟು ಹಣ ಬಿಡುಗಡೆಯಾಗಿದೆ.
 
ಯಾರು.. ಯಾರಿಗೆ ಹಣ ಬಿಡುಗಡೆ ಅಗಿದೆ, ಯಾವ ಯಾವ ವಾರ್ಡಗಳಿಗೆ ಹಣ ಬಿಡುಗಡೆ ಮಾಡಿದ್ದೀರಾ?ಬಿಲ್ ಪಾವತಿ ಮಾಡುವಗ ಯಾವ ಮಾನದಂಡ ಪಾಲಿಸಲಾಗಿದೆ, ಕೊಟ್ಟಿರೋ ಹಣಕ್ಕೆ ಬಿಲ್ ಇದ್ಯಾ..?ಬಿಲ್ ಪಾವತಿ ವೇಳೆ ಕಾಮಗಾರಿ ಪರಿಶೀಲನೆ ಮಾಡಿದ್ದೀರಾ?ಹೀಗೆ ನೋಟೀಸ್ನಲ್ಲಿ ಕೆಲ ಪ್ರಶ್ನೆಗಳನ್ನೂ ಇಡಿ ಅಧಿಕಾರಿಗಳು ಕೇಳಿದ್ದಾರೆ.ಈ ಹಿಂದೆ ಬಿಬಿಎಂಪಿ ಅಧಿಕಾರಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಿಸಲಾಗಿದೆ.ಮಹಜರಿನ ವೇಳೆ ಸಲ್ಲಿಸಿರೋ ದಾಖಲೆಗೂ ಮೌಖಿಕ ಹೇಳಿಕೆಗೂ ಭಾರಿ ವ್ಯತ್ಯಾಸ ಇದೆ.ಬಿಬಿಎಂಪಿ ಅಧಿಕಾರಿಗಳು ನೀಡಿರೋ ಹೇಳಿಕೆಗೂ ಇಡಿ ಬಳಿ ಇರೋ ದಾಖಲೆಗೂ ಬಾರಿ ವ್ಯತ್ಯಾಸ ಇದ್ದು ,ಮೇಲ್ನೋಟಕ್ಕೆ ಕೊಳವೆ ಬಾವಿ ಹಗರಣದಲ್ಲಿ ಅಕ್ರಮ ನಡೆದಿರೋದು ಸತ್ಯ ಎಂಬುದು ಗೊತ್ತಾಗ್ತಿದೆ.ಇವೆಲ್ಲ ಕಾರಣಗಳಿಂದ ಬಿಬಿಎಂಪಿ ಹಣಕಾಸು ವಿಭಾಗಕ್ಕೆ ನೋಟೀಸ್ ಜಾರಿಯಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ದಕ್ಷಿಣ ಕನ್ನಡ ಮಂದಿಗೆ 24/7 ಸಹಾಯವಾಣಿ

ದಿಢೀರನೇ ಎಲ್ಲ ಶಾಸಕರಿಗೆ ಡಿನ್ನರ್ ಆಯೋಜಿಸಿ, ಸ್ಫೋಟಕ ಮಾತು ಹೇಳಿದ ಡಿಕೆ ಶಿವಕುಮಾರ್‌

ಕಾಂಗ್ರೆಸ್ಸಿಗೆ ರಾಷ್ಟ್ರದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಮುಖ್ಯ: ಸಿ.ಟಿ.ರವಿ ಆಕ್ಷೇಪ

ಇರಾನ್‌ನ ಅಧ್ಯಕ್ಷರ ಕಚೇರಿಯನ್ನೇ ಟಾರ್ಗೆಟ್ ಮಾಡಿದ ಇಸ್ರೇಲ್, ಯುಎಸ್‌

ದುಬೈನಲ್ಲಿ ಸಿಲುಕಿರುವ ಮಹಾರಾಷ್ಟ್ರದ 164 ಪ್ರವಾಸಿಗರ ಬಗ್ಗೆ ಏಕನಾಥ್ ಶಿಂಧೆ ಸ್ಫೋಟಕ ಮಾಹಿತಿ

ಮುಂದಿನ ಸುದ್ದಿ
Show comments