Publish Date: Thu, 08 Sep 2022 (15:34 IST)
Updated Date: Thu, 08 Sep 2022 (15:38 IST)
ಕುಡಿದು ಬಸ್ ಹತ್ತಿದ್ದ ವ್ಯಕ್ತಿಗೆ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದು ಹೊರದಬ್ಬಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುತ್ತೂರು ವಿಭಾಗಕ್ಕೆ ಸೇರಿದ KSRTC ಬಸ್ನ ಕಂಡಕ್ಟರ್ ದರ್ಪ ತೋರಿಸಿದ್ದಾರೆ ಎನ್ನಲಾಗಿದೆ. ಕಂಡಕ್ಟರ್ ಈ ರೀತಿಯ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ
ಪ್ರಯಾಣಿಕನೊಬ್ಬ ಬಸ್ ಹತ್ತಿದ್ದಾನೆ. ಆಗ ಕಂಡಕ್ಟರ್ ಪ್ರಯಾಣಿಕನ ತಡೆದು ವಾಗ್ವಾದ ನಡೆಸಿದ್ದಾನೆ. ಅಲ್ಲದೇ ಬಸ್ಸಿನಿಂದ ಕಳಗೆ ಇಳಿಯುವಂತೆ ಹೇಳಿದ್ದಾರೆ. ಆಗ ಬಸ್ಸಿನಿಂದ ಪ್ರಯಾಣಿಕ ಕೆಳಗೆ ಇಳಿಯಲು ನಿರಾಕರಿಸಿದಾಗ, ಕಾಲಿನಿಂದ ಒದ್ದಿದ್ದಾನೆ. ಆತ ನೆಲಕ್ಕೆ ಬೀಳುತ್ತಿದ್ದಂತೆಯೇ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ.