Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸಿಎಂ ಯಡಿಯೂರಪ್ಪ ಹೋಂ ಕ್ವಾರಂಟೈನ್ ಗೊಳಗಾದ ವೇಳೆ ಖಾಂಡೇಕರ್ ಅವರ ‘ಯಯಾತಿ’ ಪುಸ್ತಕ ಓದುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
ಬಿಎಸ್ ವೈ ಇಂತಹದ್ದೊಂದು ಫೋಟೋ ಪ್ರಕಟಿಸಿದ ಪರಿಣಾಮ ಈಗ ಏನಾಗಿದೆ ಗೊತ್ತಾ? ಸಿಎಂ ಕೈಯಲ್ಲಿದ್ದ ‘ಯಯಾತಿ’ ಪುಸ್ತಕಕ್ಕೆ ಈಗ ಭಾರೀ ಬೇಡಿಕೆ ಬಂದಿದೆ.
ಹಲವು ಓದುಗರು ಪುಸ್ತಕ ಮಳಿಗೆಗಳಿಗೆ ‘ಯಯಾತಿ’ ಪುಸ್ತಕ ನೀಡುವಂತೆ ಬೇಡಿಕೆಯಿಡುತ್ತಿದ್ದಾರಂತೆ. ಈ ಮೂಲಕ ದಿನಕ್ಕೆ ಹಲವು ಪ್ರತಿಗಳು ಮಾರಾಟವಾಗುತ್ತಿದೆ ಎಂದು ಪ್ರಮುಖ ಪುಸ್ತಕ ಮಳಿಗೆಗಳೇ ಹೇಳಿದ್ದಾವೆ. ಅದೂ ಲಾಕ್ ಡೌನ್ ಸಮಯದಲ್ಲಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿದೆ ಎಂದೇ ಹೇಳಬಹುದು.