Publish Date: Mon, 05 Jul 2021 (13:41 IST)
Updated Date: Mon, 05 Jul 2021 (15:01 IST)
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಿಳಿಗೆರೆ ನಿವಾಸಿ ಸೌಮ್ಯಾ (26) ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಮೂರು ವರ್ಷದ ಹಿಂದೆ ಮೈಸೂರಿನ ಆಲನಹಳ್ಳಿ ನಿವಾಸಿ ಗೌತಮ್ ಎಂಬಾತನ ಜೊತೆ ಸೌಮ್ಯಾಳನ್ನು ಮದುವೆ ಮಾಡಿಕೊಡಲಾಗಿತ್ತು. ಅತ್ತೆ ಹಾಗೂ ಗಂಡ ಪದೆ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಕಳೆದ ಆರು ತಿಂಗಳಿಂದ ಸೌಮ್ಯಾ ತವರು ಮನೆ ಸೇರಿದ್ದರು.
ಸೌಮ್ಯಾ ತವರು ಮನೆಯಲ್ಲಿ ಇದ್ದರೂ ಪೋನ್ ಮಾಡಿ ಗೌತಮ್ ಹಣ ತರುವಂತೆ ಪೀಡಿಸುತ್ತಿದ್ದ. ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಸೌಮ್ಯ ಕುಟುಂಬದವರು, ಮದುವೆ ವೇಳೆ ಚಿನ್ನ, ಬೆಳ್ಳಿಯನ್ನು ಕೂಡಾ ಕೊಟ್ಟಿದ್ದರು. ಅಲ್ಲದೇ ವರದಕ್ಷಿಣ ಕಾಟ ತಾಳಲಾರೇ ನಂತರ ಮೂರು ಲಕ್ಷ ಹಣವನ್ನು ಕೊಟ್ಟಿದ್ದರು.
ಎಲ್ಲಾ ಕೊಟ್ಟ ಮೇಲೂ ಮತ್ತೆ ಒಂದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಗೌತಮ್ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಗೃಹಿಣಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.