ಮುಂಬೈ: ಐಪಿಎಲ್ 14 ಆರಂಭಕ್ಕೆ ಮೊದಲು ಕ್ರಿಕೆಟಿಗರಿಗೆ ಕೊರೋನಾ ಲಸಿಕೆ ಪಡೆಯಲು ಅವಕಾಶವಿದ್ದರೂ ಅವರಿಗೇ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ.
ಲಸಿಕೆ ನೀಡಲು ಮುಂದಾದಾಗ ಆಟಗಾರರಿಗೇ ಇಷ್ಟವಿರಲಿಲ್ಲ. ಅದು ಅವರ ತಪ್ಪಲ್ಲ. ಕೊರೋನಾ ಲಸಿಕೆ ಬಗ್ಗೆ ಇದ್ದ ಜಾಗೃತಿಯ ಕೊರತೆಯಿಂದ ಈ ರೀತಿ ಆಗಿರಬಹುದು ಎಂದು ಮೂಲಗಳು ಹೇಳಿವೆ.
ತಾವಿರುವ ಜೈವಿಕ ಸುರಕ್ಷಾ ವಲಯವೇ ಅತೀ ಸುರಕ್ಷಿತ ಎಂಬ ಮನೋಭಾವ ಆಟಗಾರರಲ್ಲಿತ್ತು. ಹೀಗಾಗಿ ವ್ಯಾಕ್ಸಿನ್ ಅಗತ್ಯವಿಲ್ಲ ಎಂದೇ ನಂಬಿದ್ದರು. ಆದರೆ ಅವರ ನಂಬಿಕೆ ಸುಳ್ಳಾಯಿತು. ಜೈವಿಕ ವಲಯದಲ್ಲಿದ್ದರೂ ಆಟಗಾರರಿಗೆ ಸೋಂಕು ತಗುಲಿತು.