Publish Date: Fri, 17 Jul 2020 (14:46 IST)
Updated Date: Fri, 17 Jul 2020 (14:48 IST)
ಕೊರೊನಾ ವೈರಸ್ ನಿಂದ ಗುಣಮುಖರಾದವರಲ್ಲಿ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.
ಕೋವಿಡ್ -19 ನಿಯಂತ್ರಣಕ್ಕೆ ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರು ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಆರೋಪ ಸಹಜ. ಆದರೂ ಸೋಂಕು ಹೆಚ್ಚುತ್ತಿರುವ ಕಾರಣ ಅದರ ನಿಯಂತ್ರಣಕ್ಕಾಗಿ ಸರಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ.
ಪ್ಲಾಸ್ಮಾ ಥೆರಪಿ ಮೂಲಕ ಸೋಂಕು ಬಂದವರನ್ನು ಗುಣಪಡಿಸಬಹುದಾಗಿದ್ದು, ದಕ್ಕಾಗಿ ಸೋಂಕು ಬಂದು ನಂತರ ಗುಣಮುಖರಾದ ಜನತೆ ಪ್ಲಾಸ್ಮಾ ಥೆರಪಿಗೆ ಸಹಕಾರ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.