ವಿಶ್ವಪ್ರಸಿದ್ದ ಹಂಪಿಯ ಸ್ಮಾರಕಗಳ ಸಮೀಪ ಆಹಾರ ಅರಿಸಿ ಓಡಾಡುತ್ತಿದ್ದ ಅಳಿಲನ್ನು ಹಾವು ಬೇಟೆಯಾಡಿದೆ.
ಹಂಪಿಯ ಮಹಾನವಮಿ ದಿಬ್ಬದ ಬಳಿ ವಿಹರಿಸುತ್ತಿದ್ದ ಅಳಿಲನ್ನು ಹಿಡಿದ ಕೊಳಕು ಮಂಡಲ ಹಾವು ನಿಧಾನವಾಗಿ ಸಂಪೂರ್ಣವಾಗಿ ನುಂಗಿದೆ. ಎಷ್ಟೇ ಪ್ರಯತ್ನ ಮಾಡಿರೂ ಅಳಿಲು ಹಾವಿನ ಬಾಯಿಯಿಂದ ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಾಗಲೇ ಇಲ್ಲ. ರಸೆಲ್ ವೈಪರ್ ಎಂದು ಕರೆಯುವ ಹಾವು ನಾಗರಹಾವಿಗಿಂತ ವಿಷಕಾರಿಯಂತೆ. ಇಂಥ ಹಾವು ಕಂಡರೆ ಮನುಷ್ಯರು ಅತ್ತ ಕಡೆ ಸುಳಿಯಲ್ಲ. ಕಚ್ಚಿದರೆ ಮೈಯೆಲ್ಲ ಕೊಳತು ಹೋಗುತ್ತದೆ ಎಂಬ ಭಯವಿದೆ.
ಇಂಥ ವಿಷಕಾರಿ ಹಾವು ಆಹಾರಕ್ಕಾಗಿ ಅಳಿಲನ್ನು ನುಂಗಿದ ದೃಶ್ಯವನ್ನು ಸ್ಥಳೀಯ ಸೆಕ್ಯುರಟಿ ಗಾರ್ಡ್ ಹುಸೇನಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಅಳಿಲನ್ನು ನುಂಗಿ ಬೇಟೆಯಾಡಿ ಮಹಾನವಮಿ ದಿಬ್ಬದ ಸ್ಮಾರಕದ ಹೊರಗಿನ ಪೊದೆಯಲ್ಲಿ ಹಾವು ಮರೆಯಾಗಿದೆ.