Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುವರ್ಣಗಡ್ಡೆ ಸೇವಿಸುವುದರಿಂದ ಇಷ್ಟೆಲ್ಲಾ ಲಾಭವಿದೆ ಎಂದರೆ ನೀವು ನಂಬಲೇಬೇಕು!

ಸುವರ್ಣಗಡ್ಡೆ ಸೇವಿಸುವುದರಿಂದ ಇಷ್ಟೆಲ್ಲಾ ಲಾಭವಿದೆ ಎಂದರೆ ನೀವು ನಂಬಲೇಬೇಕು!
ಬೆಂಗಳೂರು , ಗುರುವಾರ, 2 ಆಗಸ್ಟ್ 2018 (09:43 IST)
ಬೆಂಗಳೂರು: ಗಡ್ಡೆ ತರಕಾರಿಗಳಲ್ಲಿ ಸುವರ್ಣಗಡ್ಡೆ ಪ್ರಮುಖವಾದುದು. ಇದರ ಆರೋಗ್ಯಕರ ಉಪಯೋಗಗಳು ಎಷ್ಟಿವೆ ಎಂದು ಗೊತ್ತಾದರೆ ನೀವು ಅದನ್ನು ಹೆಚ್ಚು ಹೆಚ್ಚು ಬಳಸುವುರಿ!

ಕ್ಯಾನ್ಸರ್ ಬರದು!
ಸುವರ್ಣ ಗಡ್ಡೆ ಸೇವನೆಯಿಂದ ಕ್ಯಾನ್ಸರ್ ಕಾರಕ ಅಂಶ ನಾಶವಾಗುತ್ತದೆ ಎಂದರೆ ನೀವು ನಂಬಲೇಬೇಕು. ಅದರಲ್ಲೂ ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಎ ಅಂಶ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದಂತೆ.

ಸಾಮಾನ್ಯ ರೋಗಕ್ಕೂ ಮದ್ದು
ಸುವರ್ಣಗಡ್ಡೆಯಲ್ಲಿ ಒಂದು ವಿಶಿಷ್ಟ ರೀತಿಯ ಪ್ರಾಕೃತಿಕ ಗುಣಪಡಿಸುವ ಅಂಶವಿದೆಯಂತೆ. ಹೀಗಾಗಿ ಕೆಲವು ವಿದೇಶಗಳಲ್ಲಿ ಇದು ಶೀತ, ಕೆಮ್ಮು, ಕಫದಂತಹ ಸಾಮಾನ್ಯ ಸಮಸ್ಯೆಯನ್ನು ಹೋಗಲಾಡಿಸಲು ಭಾರೀ ಒಳ್ಳೆಯ ಮದ್ದು ಎಂದೇ ಪರಿಗಣಿಸಲಾಗಿದೆ.

ವಯಸ್ಸಾಗಲ್ಲ!
ಸುವರ್ಣಗಡ್ಡೆಯಲ್ಲಿ ವಿಟಮಿನ್ ಸಿ, ಬಿ6 ಮತ್ತು ಕ್ಯಾರೋಟಿನ್, ಆಂಟಿ ಆಕ್ಸಿಡೆಂಟ್ ಅಂಶಗಳು ಬೇಕಷ್ಟು ಇದ್ದು, ಇದು ವಯಸ್ಸಾಗುವಿಕೆ ತಡೆಗಟ್ಟುತ್ತದಂತೆ!

ಕೂದಲು ಬೆಳವಣಿಗೆಗೆ
ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ಹೇರಳವಾಗಿ ಸೇವಿಸಿ. ಮೊದಲೇ ಹೇಳಿದಂತೆ ಸುವರ್ಣಗಡ್ಡೆಯಲ್ಲಿ ವಿಟಮಿನ್ ಎ ಅಂಶವಿದ್ದು, ಇದು ಕೂದಲು ಬೆಳವಣಿಗೆಗೆ ಒಳ್ಳೆಯದು.

ಮಧುಮೇಹಿಗಳಿಗೂ ಉತ್ತಮ
ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆ ಅಂಶವಿದೆ ಎನ್ನುವ ಕಾರಣಕ್ಕೆ ಗಡ್ಡೆ ತರಕಾರಿಗಳನ್ನು ಸೇವಿಸುವುದಿಲ್ಲ. ಆದರೆ ಸುವರ್ಣಗಡ್ಡೆ ಮಧುಮೇಹಿಗಳಿಗೂ ಒಳ್ಳೆಯದು ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಮೈಕೈ ನೋವಿಗೆ ಮಾತ್ರೆಯ ಬದಲು ಈ ಟಿಪ್ಸ್ ಫಾಲೋ ಮಾಡಿ ನೋಡಿ