ಆಶಾಢ ಮಾಸದ ಮೊದಲ ಏಕಾದಶಿಯಂದು ಉಡುಪಿಯ ಶ್ರೀ ಕೃಷ್ಣ ಮಠಗಳಲ್ಲಿ ತಪ್ತ ಮುದ್ರಾ ಧಾರಣೆ ಸಂಭ್ರಮ ಜೋರಾಗಿದೆ.
ಉಡುಪಿಯ ಶ್ರಿಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು. ನಾನಾ ಕಡೆಗಳಿಂದ ಬಂದ ಭಕ್ತರು ತಪ್ತ ಮುದ್ರೆಯನ್ನು ಹಾಕಿಸಿಕೊಂಡ್ರು. ಸುದರ್ಶನ ಹೋಮವನ್ನು ನಡೆಸಿ ಅದರಲ್ಲಿ ಕಾಯಿಸಿದ ಶಂಖ, ಚಕ್ರ, ಗದ, ಪದ್ಮ ಚಿಹ್ನೆಯನ್ನು ಎದೆ, ಎಡ ಮತ್ತು ಬಲ ತೋಳಿಗೆ ಹಾಕುವುದನ್ನು ತಪ್ತ ಮುದ್ರಾಧಾರಣೆ ಎಂದು ಕರೆಯಲಾಗುತ್ತದೆ.
ತಪ್ತ ಅಂದರೆ ಕಾಯಿಸಿದ ವಿವಿಧ ಚಿಹ್ನೆಗಳ ಮುದ್ರೆಗಳನ್ನು ಹಾಕುವುದು. ಈ ಚಿಹ್ನೆಗಳು ವಿಷ್ಣುವಿನ ಆಭರಣ ಸಾಧನಗಳಾಗಿವೆ. ತಪ್ತ ಮುದ್ರಾ ಧಾರಣೆಯಿಂದ ರೋಗ ರುಜಿನಗಳಿಂದ ದೂರ ಉಳಿಯ ಬಹುದು ಎಂದು ನಂಬಲಾಗುತ್ತದೆ. ಜೊತೆಗೆ ತಪ್ತ ಮುದ್ರೆ ಧಾರಣೆಯಿಂದ ಮನಸ್ಸು ಮತ್ತು ದೇಹ ಶುದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಪ್ರತೀ ಬಾರಿ ಉಡುಪಿಯಲ್ಲಿ ಮುದ್ರಾಧಾರಣೆ ಅದ್ದೂರಿಯಾಗಿ ನಡೆಯುತ್ತದೆ. ಅಲ್ಲದೇ ಪ್ರತೀ ಬಾರಿ ಶಿರೂರು ಮಠದಲ್ಲಿ ಶಿರೂರು ಲಕ್ಮ್ನಿವರ ತಿರ್ಥ ಶ್ರೀಗಳು ಭಕ್ತರಿಗೆ ಮುದ್ರಾಧಾರಣೆಯನ್ನು ನಡೆಸಿಕೊಡುತ್ತಿದ್ದರು. ಆದರೆ ಈ ಬಾರಿ ಶೀರೂರು ಶ್ರೀ ಅಸಹಜ ಸಾವಿನ ಹಿನ್ನಲೆಯಲ್ಲಿ ಶೀರೂರು ಮಠದಲ್ಲಿ ಮುದ್ರಾಧಾರಣೆ ಸ್ಥಗಿತಗೊಳಿಸಲಾಗಿದೆ.