ಪಟ್ಟದ ದೇವರನ್ನುಕೊಡಬಾರದು ಎಂದು ನಾನು ಹೇಳಿಲ್ಲ. ಇತರ ಮಠಾಧೀಶರ ವಿರೋಧ ಇತ್ತು. ಅಷ್ಟ ಮಠಾಧೀಶರಿಗೆ ಮಕ್ಕಳಿದ್ದಾರೆ ಎಂಬ ಶಿರೂರು ಶ್ರೀಗಳ ಹೇಳಿಕೆಯಿಂದ ಮಠಾಧೀಶರಿಗೆ ನೋವಾಗಿತ್ತು ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಶಿರೂರು ಶ್ರೀಗಳು ಅವರೇ ಒಪ್ಪಿಕೊಂಡಮೇಲೆ ಸನ್ಯಾಸಿ ಎಂದು ಒಪ್ಪಲು ಸಾಧ್ಯವಾಗಿಲ್ಲ. ಶಿಷ್ಯ ಸ್ವೀಕಾರ ಮಾಡಿ ಎಂದು ಇತರ ಮಠಾಧೀಶರು ಆಗ್ರಹಿಸಿದ್ದರು. ನಾನು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಬೇರೆ ಊರಲ್ಲಿದ್ದೆ ಹಾಗಾಗಿ ಅಂತ್ಯಕ್ರಿಯೆಗೆ ಬರಲಿಲ್ಲ ಎಂದು ಹೇಳಿದರು.
ನಾನು ಹೇಳಿದ್ದು ಸರಿಯಾಗಿ ವರದಿಯಾಗಿಲ್ಲ ಎಂದ ಅವರು, ಶೀರೂರು ಸ್ವಾಮೀಜಿಯಲ್ಲಿ ಅನೇಕ ಒಳ್ಳೇಗುಣಗಳು ಇದ್ದವು. ಬ್ರಾಹ್ಮಣೇತರರ ಜೊತೆಗೂ ಬೆರೆತು ಸಮಾನತೆ ತೋರಿದ್ದಾರೆ. ಉತ್ತಮಕಲಾವಿದ, ಉದಾರಿಯಾಗಿದ್ದರು. ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದರು. ಮದ್ಯಪಾನ ಮತ್ತು ಸ್ತ್ರೀಯರ ಆಸಕ್ತಿಯಿಂದ ಸನ್ಯಾಸಕ್ಕೆ ದ್ರೋಹ ಮಾಡಿದ್ದರು ಎಂದರು. ಸ್ವಲ್ಪ ಪುಂಡಾಟಿಕೆಯನ್ನೂ ಮಾಡುತ್ತಿದ್ದರು ಎಂದು ಪೇಜಾವರಿ ಶ್ರೀ ಹೇಳಿದ್ದಾರೆ.