Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಬಗ್ಗೆ ಭಕ್ತರಲ್ಲಿ ದಟ್ಟವಾಗುತ್ತಿರುವ ಸಂಶಯಗಳು

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಬಗ್ಗೆ ಭಕ್ತರಲ್ಲಿ ದಟ್ಟವಾಗುತ್ತಿರುವ ಸಂಶಯಗಳು
ಉಡುಪಿ , ಗುರುವಾರ, 19 ಜುಲೈ 2018 (20:49 IST)
 
ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಬಗ್ಗೆ ಇದೀಗ ಸಂಶಯಗಳು ಹುಟ್ಟಿಕೊಂಡಿವೆ. ಕೇಮಾರು ವಿಠಲ ದಾಸ ಸ್ವಾಮೀಜಿ ಹಾಗೂ ಸಂತೋಷ್ ಭಾರತಿ ಗುರೂಜಿ ಅವರು ಶಿರೂರು ಶ್ರೀಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿಗಳು ಸೇವಿಸಿದ ಆಹಾರದಲ್ಲಿ ವ್ಯತ್ಯಾಸವಾಗಿರುವುದರಿಂದ ಅವರ ಸಾವಾಗಿದೆಯೇ? ಅಥವಾ ಉದ್ದೇಶಪೂರ್ವಕವಾಗಿಯೇ ನಡೆದಿದ್ದಾ? ಎನ್ನುವ ಬಗ್ಗೆ ತನಿಖೆಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ

ಯಾಕೆಂದರೆ ಇತ್ತೀಚೆಗೆ ಶ್ರೀಗಳು ಹೆಚ್ಚು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ರು. ಅವರ ದೈನಂದಿನ ನಡೆ ನುಡಿಗಳು ಕೂಡಾ ಅಷ್ಟಮಠದ ಇತರ ಸ್ವಾಮೀಜಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಕಳೆದ ಕೆಲ ದಿನಗಳಿಂದ ಪಟ್ಟದ ದೇವರನ್ನು ಪರ್ಯಾಯ ಸ್ವಾಮಿಗಳು ಹಿಂದಿರುಗಿಸದ ಕಾರಣಕ್ಕೆ ಇತರ ಸ್ವಾಮೀಜಿಗಳ ವಿರುದ್ಧ ಶಿರೂರು ಶ್ರೀಗಳು ಆಕ್ರೋಶ ಭರಿತರಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ಪಟ್ಟದ ದೇವರನ್ನು ಪಡೆಯಲು ಕ್ರಿಮಿನಲ್ ಕೇಸ್ ದಾಖಲಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದಿದ್ದರು. ಬಳಿಕ ಇದ್ದಕ್ಕಿದ್ದಂತೆ ಶಿರೂರು ಶ್ರೀಗಳ ಆರೋಗ್ಯ ಹದಗೆಟ್ಟಿತ್ತು. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೂಡಾ ನಾಮಪತ್ರ ಸಲ್ಲಿಸುವ ಮೂಲಕ ಅಷ್ಟಮಠದ ನಿಯಮಗಳನ್ನು ಮೀರಿದ ಆರೋಪಕ್ಕೂ ಗುರಿಯಾಗಿದ್ದರು.

ಕೆಲ ಸಮಯದ ಹಿಂದೆಯಷ್ಟೇ ಅಷ್ಟಮಠದ ಎಲ್ಲಾ ಸ್ವಾಮೀಜಿಗಳಿಗೂ ಮಕ್ಕಳಿದೆ ಎನ್ನುವ ಹೇಳಿಕೆ ನೀಡಿದ್ದರು. ಇದು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಇಂತಹ  ಹೇಳಿಕೆಗಳ ಮೂಲಕ ಅಷ್ಟಮಠದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವಿಷಯ ಆಗಾಗ ಹೊರ ಬರುತ್ತಿತ್ತು. ಪಟ್ಟದ ದೇವರನ್ನು ಹಿಂತಿರುಗಿಸದ ವಿಚಾರಕ್ಕೆ ಸಂಬಂಧಿಸಿ ಶಿರೂರು ಶ್ರೀಗಳು ಇಂದು ಉಳಿದ ಪರ್ಯಾಯ ಯತಿಗಳ ವಿರುದ್ಧ ನ್ಯಾಯಾಲಯದಲ್ಲಿ ಕೇಸು ದಾಖಲಿಸಬೇಕಾಗಿತ್ತು. ಆದ್ರೆ ಅದೇ ದಿನ ಅವರು ಸಾವಿಗೀಡಾಗಿರುವುದು ಭಕ್ತರಲ್ಲಿ ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಂಚಭೂತಗಳಲ್ಲಿ ಲೀನವಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ