Publish Date: Sun, 08 Jul 2018 (15:48 IST)
Updated Date: Sun, 08 Jul 2018 (15:58 IST)
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಮತ್ತೆ ಪಾಗಲ್ ಪ್ರೇಮಿಯ ಅಟ್ಟಹಾಸ ಮುಂದುವರೆದಿದೆ. ಈ ಹಿಂದೆ ಶಾಲೆಗೆ ಬೆಂಕಿ ಇಟ್ಟಿದ್ದ ಕಿರಾತಕನಿಂದ ಶಾಲೆಯ ಕೊಠಡಿಯಲ್ಲಿ ಐದು ಲವ್ ಲೆಟರ್ ಈಗ ಶಿಕ್ಷಕರಿಗೆ ದೊರೆತಿದೆ. ಹಳೆಯ ಪ್ರೇಮಿಗಳನ್ನು ಒಂದು ಮಾಡದಿದ್ದಲ್ಲಿ ಶಾಲೆ ಧ್ವಂಸಗೊಳಿಸುವದಾಗಿ ಬೆದರಿಕೆ ಹಾಕಲಾಗಿದೆ.
ಪೋಲಿಸರು ತಮ್ಮನ್ನು ಪತ್ತೆ ಹಚ್ಚುವದು ಅಸಾಧ್ಯ ಎಂದು ಬರೆದಿರುವ ಪತ್ರ. ಘಟನೆ ನಡೆದು ತಿಂಗಳು ಕಳೆದರು ಪತ್ತೆಯಾಗದ ಪಾಗಲ್ ಪ್ರೇಮಿ. ಈ ಕುರಿತು ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೆ ನಡೆದ ಕೃತ್ಯದಿಂದ ಬೆಚ್ಚಿ ಬಿದ್ದ ಶಾಲೆಯ ಆಡಳಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು.
ವಿದ್ಯಾರ್ಥಿಗಳ, ಶಿಕ್ಷಕರ ಅಲ್ಲದೇ ಗ್ರಾಮಸ್ಥರ ಚಿಂತೆಗೆ ಕಾರಣವಾಗಿದ್ದಾನೆ. ಪಾಗಲ್ ಪ್ರೇಮಿ ಯಾರೆಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.