Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಗಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಕೆಲವರ ಹೆಸರನ್ನು ಕೈಬಿಟ್ಟ ವಿಚಾರದ ಬಗ್ಗೆ ಡಿಸಿಎಂ ಹೇಳಿದ್ದೇನು ಗೊತ್ತಾ?

ನಿಗಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಕೆಲವರ ಹೆಸರನ್ನು ಕೈಬಿಟ್ಟ ವಿಚಾರದ ಬಗ್ಗೆ ಡಿಸಿಎಂ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಸೋಮವಾರ, 7 ಜನವರಿ 2019 (12:33 IST)
ಬೆಂಗಳೂರು : ನಿಗಮಂಡಳಿಗಳ ಅಧ್ಯಕ್ಷರ ಪಟ್ಟಿಯಲ್ಲಿ ಕೆಲವರ ಹೆಸರನ್ನು ಕೈಬಿಟ್ಟ ವಿಚಾರಕ್ಕೆ ಸಂಬಂಧಪಟ್ಟಂತೆ ಬಾಕಿ ಉಳಿದಿರುವ ಹೆಸರುಗಳಿಗೆ ಅಂಗೀಕಾರ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುವುದಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಗಮಮಂಡಳಿಗಳ ನೇಮಕಾತಿಯಲ್ಲಿ ಯವುದೇ ಗೊಂದಲ ಇಲ್ಲ. ಕಾಂಗ್ರೆಸ್ ನೀಡಿದ ಪಟ್ಟಿಗೆ ಮುಖ್ಯಮಂತ್ರಿಯವರು ಸಹಿ ಹಾಕುತ್ತಾರೆ. ಈಗಾಗಲೇ ಕೆಲವು ಹೆಸರುಗಳಿಗೆ ಸಹಿ ಹಾಕಿದ್ದು, ಈ ಕುರಿತಂತೆ ಸರ್ಕಾರದ ಅಧಿಸೂಚನೆ ಹೊರಬಿದ್ದಿದೆ ಎಂದು ಹೇಳಿದ್ದಾರೆ.


ಕೆಲವು ಹೆಸರುಗಳನ್ನು ಮೊದಲ ಹಂತದಲ್ಲಿ ಕೈಬಿಟ್ಟಿದ್ದಾರೆ. ಆದರೆ ಯಾವ ಕಾರಣಕ್ಕೆ ಎಂದು ತಮಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಯವರ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಈವರೆಗೂ ಅವರು ಪಟ್ಟಿಯನ್ನು ತಿರಸ್ಕರಿಸುವುದಾಗಿ ಹೇಳಿಲ್ಲ. ಕಾಂಗ್ರೆಸ್‍ ಗೆ ಮೊದಲು ಶಿಫಾರಸು ಮಾಡಿರುವ ಹೆಸರುಗಳನ್ನು ಯಥಾವತ್ತಾಗಿ ಅಂಗೀಕರಿಸುವಂತೆ ತಾವು ಸಿಎಂ ಅವರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನಗಳ ಕಾಲ ಮುಷ್ಕರದ ಹಿನ್ನಲೆ; ಖಾಸಗಿ ಶಾಲೆಗಳಿಗೆ ರಜೆ ಘೋಷಣೆ