Publish Date: Wed, 14 Oct 2020 (16:17 IST)
Updated Date: Wed, 14 Oct 2020 (16:19 IST)
ಡೋಣಿ ಪ್ರವಾಹಕ್ಕೆ ಇನ್ನಿಲ್ಲದ ಹಾನಿ ಸಂಭವಿಸಿದ್ದು, ಜನರು ಕಂಗಾಲಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ವಿಜಯಪುರ - ತಾಳಿಕೋಟೆ ರಸ್ತೆ ಸಂಚಾರ ಬಂದ್ ಆಗಿದೆ. ಸೇತುವೆ ಜಲಾವೃತಗೊಂಡಿದೆ.
ತಾಳಿಕೋಟೆ ತಾಲೂಕಿನ ಹಡಗಿನಾಳ, ಕಲ್ಲದೇವನಹಳ್ಳಿ, ಶಿವಪುರ, ಹರನಾಳ, ಮೂಕಿನಾಳ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಾಳಿಕೋಟೆ ಪಟ್ಟಣದ ಹೊರ ಭಾಗದ ಹನುಮಾನ ಮಂದಿರವು ಜಲಾವೃತ ಗೊಂಡಿದೆ.
ಡೋಣಿ ನದಿಯಲ್ಲಿ ನೀರು ಏರಿಕೆ ಹಾಗೂ ಮಳೆಯಿಂದಾಗಿ ಜಮೀನುಗಳು ಕೆರೆಗಳಂತಾಗಿವೆ.
ವಿವಿಧ ಬೆಳೆಗಳು ತಮ್ಮ ಕಣ್ಮುಂದೆ ಜಲಾವೃತಗೊಂಡು ಬೆಳೆ ಹಾನಿಯಾಗುತ್ತಿರುವುದನ್ನ ಕಂಡ ರೈತರು ಕಂಗಾಲಾಗಿದ್ದಾರೆ.