ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ರಾಜ್ಯದ ಈ ಜಿಲ್ಲೆ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಉಡುಪಿಯಲ್ಲಿ 1050 ಕೊರೊನಾ ಕೇಸ್ ಗಳು ದಾಖಲಾಗಿದ್ದರೆ, ಆ ದಾಖಲೆಯನ್ನು ಕಲಬುರಗಿ ಜಿಲ್ಲೆ ಮುರಿದಿದ್ದು, ಕಲಬುರಗಿಯಲ್ಲಿ ಈವರೆಗೆ 1126 ಕೇಸ್ ಗಳು ದೃಢಪಟ್ಟಿವೆ.
ಬೆಂಗಳೂರು ನಗರದಲ್ಲಿ 982 ಕೊರೊನಾ ವೈರಸ್ ಪೀಡಿತರು ಕಂಡು ಬಂದಿದ್ದಾರೆ. ಕಲಬುರಗಿಯಲ್ಲಿ ಇದೀಗ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದ್ದು, ಪೀಡಿತರ ಸಂಖ್ಯೆಯಲ್ಲಿ ಕಲಬುರಗಿ ಮೊದಲ ಸ್ಥಾನದಲ್ಲಿದೆ.