Daily Horoscope

Select Your Language

Notifications

webdunia
webdunia
webdunia
webdunia

ಕೆಜಿಎಫ್ ಹವಾ ಜೋರಾಗುತ್ತಿದೆ ಗೊತ್ತಾ?

ಕೆಜಿಎಫ್
ಕೆಜಿಎಫ್ ಚಲನಚಿತ್ರ ಬಿಡುಗಡೆಗೂ ಮೊದಲೇ ದಾಖಲೆ ನಿರ್ಮಿಸುತ್ತಿದೆ. ಚಿತ್ರದ ಟ್ರೇಲರ್‌ನ್ನು 2 ಕೋಟಿಗೂ ಅಧಿಕ ಮಂದಿ ವೀಕ್ಷಿಸಿ ಮತ್ತೊಂದು ದಾಖಲೆ ಮಾಡಿದೆ.

ಕೆಜಿಎಫ್ ಟ್ರೇಲರ್ ಐದೂ ಭಾಷೆಗಳಲ್ಲಿ ತೆರೆಕಂಡಿದೆ. ಕೆಲವೇ ದಿನಗಳಲ್ಲಿ ಚಿತ್ರದ ಟ್ರೇಲರ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡಿರುವ ಟ್ರೇಲರ್‌ನ ಒಟ್ಟು ವೀಕ್ಷಣೆ 2 ಕೋಟಿಯ ಗಡಿ ದಾಟಿದ್ದು, ಶಾರೂಖ್ ಖಾನ್ ಅಭಿನಯದ ಜಿರೋ ಹಾಗೂ ರಜನೀಕಾಂತ್ ಅಭಿನಯದ 2.0 ಚಿತ್ರಗಳಿಗೆ ಮತ್ತೆ ನಡುಕು ಹುಟ್ಟಿಸುವಂತಾಗಿದೆ.

‘ಕೆಜಿಎಫ್’ ಚಿತ್ರದ ಟ್ರೇಲರ್‌ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ದಾಖಲೆಯ ಮೇಲೆ ದಾಖಲೆ ಸೃಷ್ಟಿಯಾಗುತ್ತಿದೆ. ಅಚ್ಚರಿ ಏನೆಂದರೆ ಕನ್ನಡ ಸಿನಿಮಾವೊಂದು ಈ ರೀತಿ ದಾಖಲೆ ಮಾಡುತ್ತಿರುವುದು ಇದೇ ಮೊದಲು.



Share this Story:

Follow Webdunia kannada

ಮುಂದಿನ ಸುದ್ದಿ

ತಲೆ, ದೇಹಕ್ಕೆ ಹೊಂದಿಕೊಳ್ಳುವ ಯಶಸ್ವಿ ಶಸ್ತ್ರಚಿಕಿತ್ಸೆ