Publish Date: Wed, 12 Sep 2018 (07:14 IST)
Updated Date: Wed, 12 Sep 2018 (07:16 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್’ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ.
ಅದೇನೆಂದರೆ ರಾಕಿಂಗ್‌ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳು 19ರ ಸಂಜೆ 6 ಗಂಟೆಗೆ 'ಕೆಜಿಎಫ್' ಬಿಡುಗಡೆ ಆಗಲಿರುವ ದಿನಾಂಕ ಪ್ರಕಟವಾಗಲಿದೆ. ಅಂದೇ ಈ ಚಿತ್ರದ ಟ್ರೈಲರ್ ಯಾವಾಗ ಶೀರ್ಷಿಕೆ ಆಗಲಿದೆ ಎಂಬುದು ರಿವೀಲ್ ಆಗಲಿದೆ.
'ಕೆಜಿಎಫ್' ಚಿತ್ರದಲ್ಲಿ ಯಶ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಟಾಲಿವುಡ್ ನಟಿ ತಮನ್ನಾ ಭಾಟಿಯಾ ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ 'ಕೆಜಿಎಫ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.