ಕೊರೊನಾದಿಂದ ಬಚಾವ್ ಆಗಲು ರಾಜ್ಯದಲ್ಲಿ ಮೊದಲ ಬಾರಿಗೆ ವಿನೂತನವಾಗಿ ಸ್ಯಾನಿಟೈಜರ್ ಸಿದ್ಧಪಡಿಸಲಾಗಿದೆ.
ರೆಕ್ಟಿಫೈಡ್ ಸ್ಪಿರಿಟ್ ನಿಂದ ಈಗ ಸ್ಯಾನಿಟೈಸರ್ ತಯಾರಿಸಲು ನಿರ್ಧಾರಿಸಲಾಗಿದೆ. ಇದು ರಾಜ್ಯದಲ್ಲಿ ಯೇ ಪ್ರಥಮ ಪ್ರಯೋಗ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಮಂಡ್ಯದಲ್ಲಿ 3 ಸಕ್ಕರೆ ಕಾರ್ಖಾನೆಗಳು ಇವೆ. ಅದರಲ್ಲಿ ಮದ್ದೂರು ತಾಲ್ಲೂಕು ಕೊಪ್ಪ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆ ಯವರು 500 ಲೀಟರ್ ರೆಕ್ಟಿಫೈಡ್ ಸ್ಪಿರಿಟ್ ನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಇದರಿಂದ ಸ್ಯಾನಿಟೈಸರ್ ತಯಾರಿಸಬಹುದು.
ಈಗ ನಾವು 250 ಲೀಟರ್ ಸ್ಪಿರಿಟ್ ನ್ನು ಚಿಕ್ಕಮಗಳೂರು ಜಿಲ್ಲೆ ಗೆ ಕಳುಹಿಸುತ್ತಿದ್ದೇವೆ. ಅವರು ಇದರಲ್ಲಿ ಸ್ಯಾನಿಟೈಸರ್ ತಯಾರಿಸಿ ಸಾರ್ವಜನಿಕರಿಗೆ ಹಾಗೂ ಕೋವಿಡ್ -19 ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ವಿತರಣೆ ಮಾಡಬಹುದು ಎಂದಿದ್ದಾರೆ.