Publish Date: Sat, 28 Jan 2023 (19:12 IST)
Updated Date: Sat, 28 Jan 2023 (19:16 IST)
ಮಂಡ್ಯ, ಕನಕಪುರದಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಸೇರುತ್ತಿದ್ದಾರೆ, ಬರುವವರನ್ನೆಲ್ಲಾ ಬೇಡ ಅನ್ನೋಕೆ ಆಗುತ್ತಾ. ಕೆಲವರು ತಾವಾಗಿಯೇ ಕಾಂಗ್ರೆಸ್‌ಗೆ ಬರ್ತೀನಿ ಅಂತಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ ಜೆಡಿಎಸ್ ಮೇಲೆ ನಾನೇನು ಕುಸ್ತಿ ಮಾಡ್ಲಾ..? ಯಾರ ಮೇಲೂ ನಾನು ವೈಯಕ್ತಿಕ ಟೀಕೆ ಮಾಡಲ್ಲ, ಜೆಡಿಎಸ್ ಗೆಲ್ಲಲ್ಲ ಅಂತಾ ನಾನ್ ಹೇಳಲ್ಲ.. ಜೆಡಿಎಸ್ ಏನು ಅಂತಾ ನನಗೂ ಗೊತ್ತಿದೆ. ಜೆಡಿಎಸ್‌ಗೆ ಅವರದ್ದೇ ಸಿದ್ದಾಂತ ಇದೆ, ನಾನ್ ಟೀಕೆ ಮಾಡಲ್ಲ. ಆದರೆ ಕುಮಾರಣ್ಣ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಾ ಇದ್ದಾರೆ.ಈಗಲೇ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಹೇಳ್ತಾ ಇದೇನಿ ಎಂದು ವ್ಯಂಗ್ಯವಾಡಿದರು.