ಅದು ಮಟ ಮಟ ಮಧ್ಯಾಹ್ನದ ಸಮಯ.ಪೊಲೀಸ್ ವೇಶದಲ್ಲಿ ಬಂದಿದ್ದ ಕ್ರಿಮಿಗಳು ಕಾರೊಂದನ್ನ ಸುತ್ತುವರೆದಿದ್ದರು.ನೋಡ ನೋಡ್ತಿದ್ದಂತೆ ಎರಡು ಬ್ಯಾಗ್ ಅನ್ನ ಮತ್ತೊಂದು ಕಾರಿಂದ ಹೊತ್ತೊಯ್ದಿದ್ದರು.ಅದು ಡಿಸಂಬರ್ 27 ರ ಮಧ್ಯಾಹ್ನ 1.30 ರ ಸಮಯ.ಸ್ಥಳ ಶಾಂತಿನಗರ ಬಸ್ ನಿಲ್ದಾಣ ಬಳಿಯ ಕೆ.ಹೆಚ್.ರಸ್ತೆಯ ಸಿಗ್ನಲ್.ಅದೇ ಸಿಗ್ನಲ್ ಬಳಿ ಸ್ವಿಫ್ಟ್ ಡಿಜೈರ್ ಕಾರೊಂದು ಬಂದು ನಿಂತಿತ್ತು.ಕಾರಲ್ಲಿ ಓರ್ವ ಪೊಲೀಸ್ ವೇಷದಲ್ಲಿ ಇದ್ದಿದ್ರೆ.ಕಾರಿನ ಮುಂದೆ ಪೊಲೀಸ್ ಅನ್ನೋ ಬೋರ್ಡ್ ಕೂಡ ಇತ್ತು.ಹೀಗೆ ಬಂದವರು ಮತ್ತೊಂದು ಕಾರನ್ನ ಅಡ್ಡ ಹಾಕಿ ಮಾತುಕತೆಗೆ ಇಳಿದಿದ್ರು.ಅಲ್ಲಿದ್ದ ಜನರು ಪೊಲೀಸರ ಸಹವಾಸ ನಮಗ್ಯಾಕೆ ಅಂತಾ ಮುಂದೆ ಮುಂದೆ ಸಾಗ್ತಿದ್ರು.ಆದ್ರೆ ಅಲ್ಲಿ ಆಗಿದ್ದು ಮಾತ್ರ ನಿಜಕ್ಕೂ ಭಯಾನಕ
ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುಳಿತಿರೊ ಆರೋಪಿಗಳ ಹೆಸರು ಭರತ್ ಶಿವರಾಮ್ ,ಶೇಕ್ ಚೆಂಪತಿ ಲಾಲ್ ಪಾಷ,ಶೇಕ್ ಚಂಪತಿ ಜಾಕಿರ್,ಮೂಲತಃ ಆಂದ್ರಪ್ರದೇಶದವ್ರು ಏನಿಲ್ಲ ಅಂದ್ರು ಒಬ್ಬೊಬ್ಬರ ಮೇಲೆ 50 ಕ್ಕೂ ಹೆಚ್ಚು ಕೇಸ್ ಗಳಿವೆ.ಆಂದ್ರದಿಂದ ಬೆಂಗಳೂರಿಗೆ ಬಂದು ರಾಬರಿ ಮಾಡಿ ಜೈಲು ಸೇರಿದ್ದಾರೆ..ಡಿಸಂಬರ್ 27 ರಂದು ಅಡಿಕೆ ವ್ಯಾಪರಸ್ಥರಾದ ದಕ್ಷಿಣಮೂರ್ತಿ ಮತ್ತು ಮೋಹನ್ ಎಂಬುವರು ಕುಮಾರಸ್ವಾಮಿ ಮತ್ತು ಚಂದನ್ ಎಂಬ ಕೆಲಸಗಾರರಿಗೆ 80 ಲಕ್ಷ ಹಣ ನೀಡಿ ಅಡಿಕೆ ಖರೀದಿಗೆ ಅಂತಾ ತಮಿಳುನಾಡಿಗೆ ಕಳುಹಿಸಿಕೊಟ್ಟಿದ್ರು ಶಾಂತಿನಗರದ ಕೆ.ಹೆಚ್.ಬಿ ರಸ್ತೆ ಬಳಿ ಬರ್ತಿದ್ದಂತೆ ಪೊಲೀಸ್ ಸ್ಟಿಕ್ಕರ್ ಇದ್ದ ಸ್ವಿಫ್ಟ್ ಕಾರಿನಲ್ಲಿ ಅಡ್ಡ ಹಾಕಿದ್ದ ಆರೋಪಿಗಳು ನಾವು ಪೊಲೀಸರು ಹವಾಲ ಹಣವನ್ನು ಸಾಗಿಸ್ತಿದ್ದೀರಾ ಅಂತಾ ಬೆದರಿಸಿ.ಎರಡು ಬ್ಯಾಗ್ ನಲ್ಲಿದ್ದ 80 ಲಕ್ಷ ಹಣವನ್ನು ಕಸಿದು ಪರಾರಿಯಾಗಿದ್ರು.ಕಾರಿನಲ್ಲಿದ್ದ ಓರ್ವ ಆಂಧ್ರಪ್ರದೇಶದ ಪೊಲೀಸ್ ವೇಶದಲ್ಲಿದ್ದ.
ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ತನಿಖೆಗೆ ಇಳಿದ ಪೊಲೀಸರಿಗೆ ಆರೋಪಿಗಳು ನಕಲಿ ಪೊಲೀಸ್ ವೇಶದಲ್ಲಿ ಬಂದಿರೋದು ಗೊತ್ತಾಗಿದೆ.ಅಲ್ಲದೇ ಹೆಬ್ಬಾಳ ರಸ್ತೆಯಲ್ಲಿರುವ ಫೋರ್ ಸೀಸನ್, ಜೆಡಬ್ಲ್ಯೂ ಮ್ಯಾರಿಯಟ್ ಸೇರಿದಂತೆ ಆಂದ್ರಪ್ರದೇಶದಲ್ಲಿ ಅಂದರ್ ಬಾಹರ್ ಜೂಜಾಟವಾಡಿ ಹಣ ಕಳೆದುಕೊಂಡಿದ್ರು ಅನ್ನೋದು ಗೊತ್ತಾಗಿದೆ.ಸದ್ಯ ಮೂವರು ಆರೋಪಿಗಳನ್ನ ಬಂಧಿಸಿದ್ದು ಮತ್ತೋರ್ವ ಪ್ರಮುಖ ಆರೋಪಿ ಲತೀಫ್ ಎಂಬಾತ ಪರಾರಿಯಾಗಿದ್ದಾನೆ.ಈತನ ಮೇಲೆ ಆಂದ್ರಪ್ರದೇಶದಲ್ಲಿ 150 ಕ್ಕೂ ಹೆಚ್ಚು ಪ್ರಕರಣಗಳಿದ್ದು,ಆತನ ಪತ್ತೆಗೆ ಬಲೆ ಬೀಸಲಾಗಿದೆ,ಸದ್ಯ ಬಂಧಿತರಿಂದ 37 ಲಕ್ಷ ರೂಪಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ.ಇದಿಷ್ಟೇ ಅಲ್ಲದೆ 80 ಲಕ್ಷ ಕೂಡ ಹವಾಲ ಹಣ ಅನ್ನೋದು ಪತ್ತೆಯಾಗಿದ್ದು,ಐಟಿ ಇಲಾಖೆಗೆ ಮಾಹಿತಿಯನ್ನ ರವಾನಿಸಲಾಗಿದೆ.