Publish Date: Mon, 11 Mar 2019 (15:47 IST)
Updated Date: Mon, 11 Mar 2019 (15:49 IST)
ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿರುವ ಉಮೇಶ್ ಜಾಧವರ ತಮ್ಮ ಮುಂಬೈ ಪ್ರವಾಸದ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.
ಉಮೇಶ್ ಜಾಧವ್ ಮುಂಬೈ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾಮರಾವ್ ಮಹಾರಾಜರ ಕರೆ ಮೇರೆಗೆ ಮುಂಬೈಗೆ ಹೋಗಿದ್ದೆ. ಸೇವಾಲಾಲ್ ಚೌಕ್ ಉದ್ಘಾಟನೆ ಹಿನ್ನೆಲೆಯಲ್ಲಿ ಮುಂಬೈಗೆ ಭೇಟಿ ನೀಡಿದ್ದೆ. ಇದೇ ಸಂದರ್ಭದಲ್ಲಿ ಗುಳೇ ಹೋಗಿರುವ ಕಲಬುರ್ಗಿ ಕ್ಷೇತ್ರದ ಮತದಾರರನ್ನೂ ಭೇಟಿಯಾಗಿದ್ದೇನೆ ಎಂದರು.
ಇನ್ನು ಸುಮಾರು 50 ಮತದಾರರು ಮುಂಬೈಯಲ್ಲಿ ದುಡಿಮೆಗೆಂದು ಬಂದಿದ್ದಾರೆ. ಮತದಾನದ ದಿನದಂದು ಬಂದು ಮತ ಹಾಕುವಂತೆ ಮನವಿ ಮಾಡಕೊಂಡು ಬಂದಿದ್ದೇನೆ. ನಮ್ಮ ಸಮುದಾಯದ ಜೊತೆಗೆ ಇತರೆ ಸಮುದಾಯದ ಜನರೂ ದುಡಿಮೆಗೆಂದು ಹೋಗಿದ್ದಾರೆ. ಅವರ ಮತಗಳೂ ಅಮೂಲ್ಯವಾಗಿದ್ದು, ಅವರ ಬೆಂಬಲ ಕೋರಿ ಮನವಿ ಮಾಡಿದ್ದೇನೆ ಅಂತ ಕಲಬುರಗಿಯಲ್ಲಿ ಉಮೇಶ್ ಜಾಧವ್ ಹೇಳಿಕೆ ನೀಡಿದ್ದಾರೆ.