Select Your Language

Notifications

webdunia
webdunia
webdunia
webdunia

ಸಿಎಂ ಬದಲಾವಣೆ ವಿಚಾರದಲ್ಲಿ ಸಿದ್ದರಾಮಯ್ಯಗೇ ಶಾಕ್ ಕೊಟ್ಟ ಡಿಕೆ ಶಿವಕುಮಾರ್

Siddaramaiah-DK Shivakumar

Krishnaveni K

ಬೆಂಗಳೂರು , ಬುಧವಾರ, 18 ಫೆಬ್ರವರಿ 2026 (09:46 IST)
ಬೆಂಗಳೂರು: ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿರುವಾಗಲೇ ತಮ್ಮ ಒಂದು ಹೇಳಿಕೆಯಿಂದಲೇ ಸಿಎಂ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಶಾಕ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಈಗ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆ ಕೆಲವು ಶಾಸಕರು ವಿದೇಶ ಪ್ರವಾಸ ಮಾಡಿದ್ದಾರೆ. ಇನ್ನು, ಸಿಎಂ ಆಪ್ತ ಬಳಗದಲ್ಲಿರುವ ಸಚಿವ ಮಹದೇವಪ್ಪ ಬಾಲವೇ ನಾಯಿಯನ್ನು ಅಲ್ಲಾಡಿಸಕ್ಕೆ ಆಗಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿದ್ದರು.

ಮಹದೇವಪ್ಪನಿಗೆ ನಾನು ಉತ್ತರ ಕೊಡಕ್ಕೆ ಹೋಗಲ್ಲ. ಯಾರಿಗೂ ಉತ್ತರ ಕೊಡಲ್ಲ. ನಾಯಕತ್ವ ಕುರಿತಂತೆ ಸಿಎಂ, ನಾನು ಮತ್ತು ಹೈಕಮಾಂಡ್ ಸೇರಿ ನಾವೆಲ್ಲಾ ತೆಗೆದುಕೊಂಡಿರೋ ತೀರ್ಮಾನ. ಆ ತೀರ್ಮಾನಕ್ಕೆ ಟೈಂ ಬಂದಾಗ ಉತ್ತರ ಸಿಗುತ್ತದೆ. ಇದೇನೂ ಕದ್ದುಮುಚ್ಚಿ ತೆಗೆದುಕೊಂಡಿರೋ ಗುಟ್ಟಿನ ತೀರ್ಮಾನ ಅಲ್ಲ. ಸಿಎಂ ಸಿದ್ದರಾಮಯ್ಯನವರೇ ಸಮಯ ಬಂದಾಗ ರಾಜ್ಯದ ಜನತೆಗೆ ಉತ್ತರ ಕೊಡುತ್ತಾರೆ ಎಂದಿದ್ದಾರೆ.

ಅವರ ಈ ಮಾತು ಸಂಚಲನ ಮೂಡಿಸಿದೆ. ಇಷ್ಟು ದಿನ ಏನೂ ಇಲ್ಲ ಎನ್ನುತ್ತಿದ್ದ ಡಿಕೆಶಿ ಈಗ ಎಲ್ಲವೂ ಸಿಎಂ ಹೇಳುತ್ತಾರೆ ಎನ್ನುವ ಮೂಲಕ ಸಿದ್ದು ಕಣಕ್ಕೆ ಚೆಂಡು ಎಸೆದು ಶಾಕ್ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಒಪ್ಪಂದ ನಡೆದಿರುವುದು ನಿಜ ಎಂದು ಹೇಳಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೂಟ್ಯೂಬ್ ಡೌನ್: ಯೂಟ್ಯೂಬ್ ಓಪನ್ ಮಾಡಿದ್ರೆ ನಿಮಗೂ ಹೀಗೆ ಬರ್ತಿದೆಯಾ