Select Your Language

Notifications

webdunia
webdunia
webdunia
webdunia

ಯೂಟ್ಯೂಬ್ ಡೌನ್: ಯೂಟ್ಯೂಬ್ ಓಪನ್ ಮಾಡಿದ್ರೆ ನಿಮಗೂ ಹೀಗೆ ಬರ್ತಿದೆಯಾ

Youtube server down

Krishnaveni K

ಬೆಂಗಳೂರು , ಬುಧವಾರ, 18 ಫೆಬ್ರವರಿ 2026 (09:22 IST)
Photo Credit: X
ಬೆಂಗಳೂರು: ಇಂದು ಬೆಳ್ಳಂ ಬೆಳಿಗ್ಗೆಯೇ ಯೂಟ್ಯೂಬ್ ಕೈ ಕೊಟ್ಟಿದೆ. ಯೂಟ್ಯೂಬ್ ಓಪನ್ ಮಾಡಿದರೆ ಸರ್ವರ್ ಡೌನ್ ಎಂಬ ಸಂದೇಶ ಬರುತ್ತಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇಂದು ಬೆಳಿಗ್ಗೆಯೇ ಯೂಟ್ಯೂಬ್ ಓಪನ್ ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆಯಾಗಿದೆ ಎಂದು ಸಂದೇಶ ಬರುತ್ತಿದೆ. ಬಹುತೇಕರು  ಇದರಿಂದ ಸಾಕಷ್ಟು ಗೊಂದಲಕ್ಕೊಳಗಾಗಿದ್ದಾರೆ.

ಆದರೆ ಇದಕ್ಕೆ ನಿಖರ ಕಾರಣವೇನೆಂದು ಯೂಟ್ಯೂಬ್ ಕಡೆಯಿಂದ ಸ್ಪಷ್ಟನೆ ಸಿಕ್ಕಿರಲಿಲ್ಲ. ವ್ಯಾಟ್ಸಪ್, ಫೇಸ್ ಬುಕ್, ಇನ್ ಸ್ಟಾಗ್ರಾಂನಂತೇ ಯೂಟ್ಯೂಬ್ ಹಳೆಯ ಮತ್ತು ಜನಪ್ರಿಯ ಸೋಷಿಯಲ್ ಮೀಡಿಯಾ ಆಪ್. ಹೀಗಾಗಿ ಬೆಳಿಗ್ಗೆಯೇ ಯೂಟ್ಯೂಬ್ ಡೌನ್ ಆಗಿದ್ದು ಬಳಕೆದಾರರನ್ನು ಪೇಚಿಗೆ ಸಿಲುಕಿಸಿತ್ತು.


ಆದರೆ ಈಗ ಬಹುತೇಕ ಬಳಕೆದಾರರ ಸಮಸ್ಯೆ ನಿವಾರಣೆಯಾಗಿದೆ. ತಕ್ಷಣವೇ ಸಮಸ್ಯೆ ಬಗೆಹರಿಸಲಾಗಿದ್ದು ಈಗ ಬಹುತೇಕರಿಗೆ ಯೂಟ್ಯೂಬ್ ಓಪನ್ ಆಗುತ್ತಿದೆ. ಆದರೆ ಯೂಟ್ಯೂಬ್ ಡೌನ್ ಆಗುತ್ತಿದ್ದಂತೇ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಮೆಮೆಗಳು ಹರಿದಾಡಿವೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದಲ್ಲಿ ಇಂದಿನಿಂದ ಹವಾಮಾನದಲ್ಲಿ ಮಹತ್ವದ ಬದಲಾವಣೆ