Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಧಿಕಾರ ಬೇಕು ಆದರೆ ಕೆಟ್ಟವರಾಗಲು ಬಿಜೆಪಿ ಬಯಸಲ್ಲ!

ಅಧಿಕಾರ ಬೇಕು ಆದರೆ ಕೆಟ್ಟವರಾಗಲು ಬಿಜೆಪಿ ಬಯಸಲ್ಲ!
ಬೆಂಗಳೂರು , ಬುಧವಾರ, 19 ಸೆಪ್ಟಂಬರ್ 2018 (08:58 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ವಿದ್ಯಮಾನಗಳಿಗೆ ಬಿಜೆಪಿ ಆಪರೇಷನ್ ಕಮಲ್ ಇಫೆಕ್ಟ್ ಎಂದು ಕಾಂಗ್ರೆಸ್-ಜೆಡಿಎಸ್ ಆರೋಪಿಸುತ್ತಿವೆ. ಆದರೆ ಬಿಜೆಪಿ ಬಹಿರಂಗವಾಗಿ ಇದನ್ನು ನಿರಾಕರಿಸುತ್ತಲೇ ತೆರೆ ಮರೆಯಲ್ಲಿ ತನ್ನ ಪ್ರಯತ್ನ ಮುಂದುವರಿಸಿದೆ.

ಬಹಿರಂಗವಾಗಿ ಆಪರೇಷನ್ ಕಮಲಕ್ಕೆ ಮುಂದಾದರೆ ಪಕ್ಷಕ್ಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಮತ್ತು ಪಕ್ಷದ ಘನತೆಗೆ ಕುತ್ತಾಗಬಹುದು ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಇದನ್ನು ಬಹಿರಂಗವಾಗಿ ನಿರಾಕರಿಸುತ್ತಲೇ ಇದ್ದಾರೆ.

ಆದರೆ ತೆರೆಮರೆಯಲ್ಲಿ ದೋಸ್ತಿ ಪಕ್ಷಗಳ ನಡೆ ನೋಡಿಕೊಂಡು ತನ್ನ ಗಾಳ ಹಾಕಲು ಕಾಯುವಿಕೆಯ ತಂತ್ರಕ್ಕೆ ಮೊರೆ ಹೋಗಿದೆ. ರಾಜ್ಯದ ವಿದ್ಯಮಾನಗಳ ಬಗ್ಗೆ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ರಾಜ್ಯ ನಾಯಕರು ನಿರಂತರವಾಗಿ ಮಾಹಿತಿ ಕೊಡುತ್ತಲೇ ಇದ್ದಾರೆ. ಯಾವುದೇ ಕಾರಣಕ್ಕೂ ಅಪವಾದ ಹೊತ್ತುಕೊಂಡು ಅಧಿಕಾರಕ್ಕೆ ಏರದಂತೆ ರಾಷ್ಟ್ರೀಯ ನಾಯಕರ ಸೂಚನೆಯಿದೆ. ಹೀಗಾಗಿ ಬಿಜೆಪಿ ತಾಳ್ಮೆಯ ಆಟವಾಡಲು ನಿರ್ಧರಿಸಿದಂತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದ ಜತೆ ಕೈ ಜೋಡಿಸಿದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ