ಡಿಕೆ ಶಿವಕುಮಾರ್ ಕಾರಿಗೆ ಮುತ್ತಿಗೆ

Webdunia
ಭಾನುವಾರ, 18 ಜುಲೈ 2021 (19:49 IST)
ಸದಾಶಿವ ವರದಿ ಜಾರಿಗೆ ಮಾಡುವಂತೆ ಹಾಗೂ ಡಿ ಕೆ ಶಿ ಅವರು ಅಸ್ಪೃಶ್ಯರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ,ರಾಜ್ಯ ಮಾದಿಗ ಮಹಾಸಭಾ ವತಿಯಿಂದ ಬಾಗಲಕೋಟ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಡಿ ಕೆ ಶಿವಕುಮಾರ ಅವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
 ಮಾದಿಗ ಮಹಾಸಭಾ ಮುಧೋಳ ತಾಲೂಕಿನ ಅಧ್ಯಕ್ಷರಾದ ಸುನೀಲ ಕಂಬೋಗಿ ಅವರ ನೇತೃತ್ವದಲ್ಲಿ ಡಿ ಕೆ ಶಿವಕುಮಾರ ಹೋಗುತ್ತಿರುವ ವಾಹನಕ್ಕೆ ಅಡ್ಡಲಾಗಿ ನಿಂತು,ಕಾರು ನಿಲ್ಲಿಸಿ,ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾದಿಗ ಮಹಾಸಭಾ ಮುಖಂಡರು ಮಾತನಾಡಿ,ಕಾಂಗ್ರೆಸ್ ಪಕ್ಷಕ್ಕೆ ಮತ ಬ್ಯಾಂಕವಾಗಿ ಸಮಾಜದವರನ್ನು ಬಳಸಿಕೊಳ್ಳುತ್ತಿರಿ.ಆದರೆ ಯಾವುದೇ ಸೌಲಭ್ಯ ನೀಡುವುದಿಲ್ಲ.ಪಕ್ಷದ ಪದಾಧಿಕಾರಿಗಳು ಸೇರಿದಂತೆ ಇತರ ಹುದ್ದೆಗಳು ನೀಡುವುದಿಲ್ಲ.ಕೇವಲ ಮತಕ್ಕಾಗಿ ಮಾತ್ರ ಸಿಮೀತವಾಗಿದೆ. ಮಾದಿಗ ಮೀಸಲಾತಿ ಹೋರಾಟ ಬಗ್ಗೆ ನಿಮ್ಮ ನಿಲುವು ಏನು. ಈ ಬಗ್ಗೆ ನೀವು ಸ್ಪಷ್ಟಪಡಿಸಬೇಕು ಎಂದರು ಡಿ ಕೆ ಶಿವಕುಮಾರ ಅವರ ಮುಂದೆ ತಮ್ಮ ಮನವಿ ನೀಡಿದರು.ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ ಮಾತನಾಡಿ,ನಾನು ಯಾವುದೇ ಜಾತಿ ಪಂಗಡ ಮಾಡಲ್ಲ.ಮೀಸಲಾತಿ  ಸಿಗಬೇಕು ಎಂಬುದು ನಮ್ಮದು ವಾದವಾಗಿದೆ.ನೀವು ಕಾಂಗ್ರೆಸ್ ಪಕ್ಷದವರು,ನಿಮ್ಮ ಎಲ್ಲಾ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ.ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಎಲ್ಲಾ ಜಾತಿಗೆ ಸಮಾನವಾಗಿ ನೋಡಲಾಗಿವುದು.ಈ ಬಗ್ಗೆ ಎಲ್ಲಾ ವಿಚಾರ ಮಾಡಿ ಚರ್ಚೆ ನಡೆಸಿ,ಸರಿಪಡಿಸಲಾಗುವುದು ಎಂದು ಡಿ ಕೆ ಶಿವಕುಮಾರ ಭರವಸೆ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ: ಮಹಿಳೆ ಮೇಲೆ ಐವರಿಂದ ಗ್ಯಾಂಗ್ ರೇಪ್‌, ಗುಪ್ತಾಂಗಕ್ಕೆ ಗುಂಡು, ಕಲ್ಲು, ಮರದ ತುಂಡು ಹಾಕಿ ಕ್ರೌರ್ಯ

Video, ಬೋಟ್ ರೈಡಿಂಗ್ ಎಂಜಾಯ್ ಮಾಡುತ್ತಿದ್ದ ತಾಯಿಗೆ ಐಫೋನ್ ಎಸೆದು ಶಾಕ್ ಕೊಟ್ಟ ಮಗು

ತಾಯಿ ಮಲಗಿದ್ದ ವೇಳೆ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಮಲತಂದೆಗೆ 20 ವರ್ಷ ಕಠಿಣ ಶಿಕ್ಷೆ

ಯಾರು ಇದುವರೆಗೂ ಆರ್‌ಎಸ್‌ಎಸ್‌ ಮುಟ್ಟಿಲ್ಲ: ಬಿಜೆಪಿ ಎಂಪಿ ರಮೇಶ್ ಜಿಗಜಿಣಗಿ

ಅಕ್ರಮ ಹಣ ವರ್ಗಾವಣೆ, ಆಂಧ್ರದ ಮಾಜಿ ಸಚಿವ ವೆಂಕಟ ನಾಗೇಶ್ವರ ಪುತ್ರ ವಶಕ್ಕೆ

ಮುಂದಿನ ಸುದ್ದಿ
Show comments