Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೆಲವು ದಿನಗಳ ಹಿಂದೆಯಷ್ಟೇ ನಾಪತ್ತೆಯಾಗಿದ್ದ ಸಿದ್ದಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಶವ ತುಮಕೂರಿನ ಮಠದ ಹಿಂದಿರುವ ರಾಮದೇವರ ಬೆಟ್ಟದ ಹೊಂಡದಲ್ಲಿ ಪತ್ತೆಯಾಗಿದೆ.
ಹೆಸರುಘಟ್ಟ ಸಮೀಪದ ಕಾಕೋಳ ಗ್ರಾಮದ ಪ್ರಕಾಶ್ ಅವರ ಪುತ್ರ ಗಗನ್ ಗೌಡ ಮೃತ ವಿದ್ಯಾರ್ಥಿ. ಈತ ಸಿದ್ದಗಂಗಾ ಮಠದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದ.
ಜುಲೈ 16ರಂದು ಗಗನ್ ಗೌಡ ನಾಪತ್ತೆಯಾಗಿದ್ದಾನೆ ಎಂದು ತಂದೆ ಪ್ರಕಾಶ್ ಪೊಲೀಸರಿಗೆ ದೂರು ನೀಡಿದ್ದರು. ಭಾನುವಾರ ಬೆಳಿಗ್ಗೆ ಬೆಟ್ಟಕ್ಕೆ ತೆರಳಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ಸಾವಿಗೆ ಕಾರಣ ತಿಳಿದು ಬಂದಿಲ್ಲ.