ವಿವಾದ ಸುಳಿಯಲ್ಲಿ ಡಿಕೆಶಿ!

Webdunia
ಶನಿವಾರ, 10 ಜುಲೈ 2021 (18:40 IST)
ಹೆಗಲ ಮೇಲೆ ಕೈ ಹಾಕಲು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಪಾಳ ಮೋಕ್ಷ ಮಾಡಿದ್ದು, ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಅನಾರೋಗ್ಯದಿಂದಾಗಿ ಕೆ.ಎಂ ದೊಡ್ಡಿ ಆಸ್ಪತ್ರೆಗೆ ಮಂಡ್ಯದ ಹಿರಿಯ ರಾಜಕಾರಣಿ ಮಾದೇಗೌಡರು ದಾಖಲಾಗಿದ್ದಾರೆ. ಮಾದೇಗೌಡ ಆರೋಗ್ಯ  ವಿಚಾರಿಸಲು ಡಿಕೆಶಿ ತೆರಳಿದ್ದರು. ಈ ವೇಳೆ ಮದ್ದೂರು ತಾಲೂಕಿ ಬೊಮ್ಮಾನಹಳ್ಳಿ ಕಾಂಗ್ರೆಸ್ ಮುಖಂಡ ಉಮೇಶ್ ಎನ್ನುವವರು ಡಿಕೆಶಿ ಹೆಗಲ ಮೇಲೆ  ಕೈ ಹಾಕಲು ಮುಂದಾಗಿದ್ದರು. ಈ ಸಂಧರ್ಭದಲ್ಲಿ ಡಿಕೆಶಿ ಕೈ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿ ಸರಿಯಾಗಿ ನಡೆದುಕೋ ಎಂದು ಎಚ್ಚರಿಸಿದ್ದಾರೆ. ಜೊತೆಗೆ ವಿಡಿಯೋ ಡಿಲೀಟ್ ಮಾಡುವಂತೆ ತಮ್ಮ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ಸಿಬ್ಬಂದಿಗೆ ಸೂಚಿಸಿದ್ದಾರೆ. ಡಿಕೆಶಿ ಅವರ ನಡೆಯನ್ನು ಆಡಳಿತ ಪಕ್ಷ ಬಿಜೆಪಿ ಕಟುವಾಗಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು ಆದರೆ ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ ಎಂದು ಮಾರ್ಮಿಕವಾಗಿ ಡಿಕೆಶಿ ವಿರುದ್ದ ಬಿಜೆಪಿ ಚಾಟಿ ಬೀಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೆರಿಯಾರ್ ಹೇಳಿದ್ದನ್ನೆಲ್ಲಾ ನಾವು ಒಪ್ಪಲ್ಲ, ನಮಗೆ ದೇವರ ಮೇಲೆ ನಂಬಿಕೆಯಿದೆ ಎಂದ ಸಿಎಂ ವಿಜಯ್

ಕಾಂಗ್ರೆಸ್ ನವರು ಬದನೆಕಾಯಿ ಬೆಳೆದು ಆಸ್ತಿ ಮಾಡವ್ರಾ, ಗಂಡಸ್ತನದ ರಾಜಕಾರಣ ಮಾಡಿ: ನಿಖಿಲ್ ಕುಮಾರಸ್ವಾಮಿ

ಮನೆ ವಿಷ್ಯಕ್ಕೆ ಬರಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ ಅನಿತಾ ಕುಮಾರಸ್ವಾಮಿ: ಕ್ಷಮೆ ಯಾಚಿಸಿದ ಸಚಿವ ಎಂಬಿ ಪಾಟೀಲ್

ಎಂಥಾ ದಡ್ಡಿ.. ಮೊಬೈಲ್ ಅಂಗಡಿ ಇಟ್ಟಿದ್ದ ಚೇತನ್ ಗಾಗಿ ಕೋಟ್ಯಾಧಿಪತಿ ಕೇತನ್ ನನ್ನು ಸಿಯಾ ಹತ್ಯೆ ಮಾಡಿದ್ದೇಕೆ: ರಹಸ್ಯ ಬಯಲು

ನೀಟ್ ಇಲ್ಲದೆಯೂ ಈ ವರ್ಷ ಓದಬಹುದಾದ ಮೆಡಿಕಲ್ ಕೋರ್ಸ್ ಗಳು: ಪಿಯುಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments