Publish Date: Sat, 21 Oct 2023 (18:03 IST)
Updated Date: Sat, 21 Oct 2023 (18:05 IST)
ನಿನ್ನೆ ಮ್ಯಾಚ್ ನೋಡಲು ಹೋಗಿದ್ದ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಿನ್ನೆ ಪಾಕಿಸ್ತಾನಕ್ಕೆ ಬೆಂಬಲ ಕೊಡಲು ಹೋಗಿದ್ರೋ ಅಥವಾ ಆಸ್ಟ್ರೇಲಿಯಾಗೆ ಬೆಂಬಲ ಕೊಡಲು ಹೋಗಿದ್ರೋ ಎಂದು ವ್ಯಂಗ್ಯವಾಡಿದ್ದಾರೆ. ಇಂಡಿಯಾ ಮ್ಯಾಚ್ ನಡೆಯುತ್ತಿದ್ದರೆ ಏನೋ ಬೆಂಬಲ ಕೊಡಲು ಹೋಗಿದ್ದಾರೆ ಅಂದುಕೊಳ್ಳಬಹುದಾಗಿತ್ತು.. ರಾಜ್ಯದಲ್ಲಿ ಏನೂ ಸಮಸ್ಯೆ ಇಲ್ಲ ಅಂತ ಮ್ಯಾಚ್ ನೋಡಲು ಹೋಗಿದ್ರಾ ಎಂದು ಕಿಡಿಕಾರಿದ್ರು. ಬೇರೆ ದೇಶದ ಮ್ಯಾಚ್ ನೋಡಲು 8-10 ಗಂಟೆ ಹೋಗಿದ್ರು.. ನಾನು ನಮ್ಮ ದೇಶದ ಮ್ಯಾಚ್ ಆಗಿದ್ರೆ ಬೇಡ ಅನ್ನುತ್ತಿರಲಿಲ್ಲ.. ನಾನು ಕೂಡ ಕ್ರೀಡೆಗೆ ಸಪೋರ್ಟ್ ಮಾಡುತ್ತೇನೆ.. 8-10 ಗಂಟೆ ಮ್ಯಾಚ್ ನೋಡಲು ಸಮಯ ಇದೆ, ರೈತರ ಸಮಸ್ಯೆ ಬಗೆಹರಿಸಲು ಸಮಯ ಇಲ್ವಾ ಎಂದು ವ್ಯಂಗ್ಯವಾಡಿದ್ರು.