Publish Date: Sat, 13 Jul 2019 (18:20 IST)
Updated Date: Sat, 13 Jul 2019 (18:23 IST)
ನಸುಕಿನ ವೇಳೆಯಲ್ಲೇ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಸಚಿವ ಡಿ.ಕೆ.ಶಿವಕುಮಾರ ಯತ್ನ ನಡೆಸಿದ್ರು. ಅದರ ಬೆನ್ನಲ್ಲೇ ನಡೆದ ಸಿದ್ದರಾಮಯ್ಯ-ಎಂಟಿಬಿ ಮಾತುಕತೆ ಮೈತ್ರಿ ಬಿಕ್ಕಟ್ಟಿಗೆ ತೇಪೆ ಹಾಕಲಿದೆಯಾ ಎನ್ನೋ ಕುತೂಹಲ ಮೂಡುತ್ತಿದ್ದಾದರೂ ಅದು ಅಷ್ಟಕ್ಕಷ್ಟೇ ಎಂಬಂತಾಗಿದೆಯಂತೆ.
ರಾಜೀನಾಮೆ ನೀಡಿರೋ ಎಂಟಿಬಿ ನಾಗರಾಜ್ ರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಸಿದ್ದರಾಮಯ್ಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿದ್ರು.
ಎರಡ್ಮೂರು ಗಂಟೆಗಳ ಸಮಯ ಚರ್ಚೆ ನಡೆಸಿದ್ರೂ ಯಾವುದೇ ಫಲಪ್ರದ ಅಂತ್ಯಕಾಣಲಿಲ್ಲ ಎನ್ನಲಾಗಿದೆ.
ಸಚಿವ ಡಿ.ಕೆ.ಶಿವಕುಮಾರ, ಡಾ.ಜಿ.ಪರಮೇಶ್ವರ, ಸಿದ್ದರಾಮಯ್ಯ ಹಾಗೂ ಎಂಟಿಬಿ ನಾಗರಾಜ್ ಚರ್ಚೆ ನಡೆಸಿದ್ರು. ಎಂಟಿಬಿ ನಾಗರಾಜ್ ರ ನಡೆ ಮೈತ್ರಿ ಸರಕಾರದ ವಿಶ್ವಾಸ ಮತದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗುತ್ತಿದೆ.