Publish Date: Wed, 29 Mar 2023 (16:12 IST)
Updated Date: Wed, 29 Mar 2023 (16:18 IST)
ವೈಟ್ ಫಿಲ್ಡ್ ಪೋಲಿಸ್ ಠಾಣೆಯ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.ಕ್ಷೇತ್ರದ ವೈಟ್ ಫಿಲ್ಡ್ ಸಮೀಪದ ಅಂಬೇಡ್ಕರ್ ಗುಡ್ಡದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಿಂದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಾ ವೋಟರ್ ಐಡಿಯ ಬಗ್ಗೆ ಮನವರಿಕೆ ಮಾಡುವ ಇದೇ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯ ಬಿಜೆಪಿ ನಾಯಕರುಗಳು ಪೊಲೀಸರಿಗೆ ಕರೆ ಮಾಡಿದ್ದಾರೆ.
ಪೋಲಿಸ್ ಸಿಬ್ಬಂದಿಯಿಂದ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಮಾಡಲಾಗಿದ್ದು,ಕಾಂಗ್ರೆಸ್ ನ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಒಂದು ದಿನ ಠಾಣೆ ಯಲ್ಲಿ ಅನ್ನ ನೀರು ಕೊಡದೆ ಹಿಟ್ಟಿದ್ದಾರೆ ಎಂದು ಪ್ರತಿಭಟನೆ ಮಾಡಲಾಗಿದೆ.
ಸರ್ಕಾರ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಅಥವಾ ತಿದ್ದುಪಡಿ ಮಾಡಲು ಅನುವು ಮಾಡಿದ್ದು, ಮತದಾರರಿಗೆ ಕಾಂಗ್ರೆಸ್ ಕಾರ್ಯಕರ್ತರು ತಿಳಿ ಹೇಳುವ ಸಂದರ್ಭದಲ್ಲಿ ಪೋಲಿಸರಿಂದ ಬಂಧನ ಮಾಡಿದ್ದು,ಸದ್ಯ ಕಾಂಗ್ರೆಸ್ ಕಾರ್ಯಕರ್ತರು ವೈಟ್ಫೀಲ್ಡ್ ಪೊಲೀಸ್ ಠಾಣೆ ಮುಂಭಾಗ ಈ ವಿಷಯವಾಗಿ ಪ್ರತಿಭಟನೆ ಮಾಡ್ತಿದ್ದುಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ಸ್ ಪಕ್ಷದ ಕಾರ್ಯಕರ್ತರು ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತರಿಗೆ ಆಗಿರುವ ಅನ್ಯಾಯ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.