Publish Date: Wed, 29 Mar 2023 (15:45 IST)
Updated Date: Wed, 29 Mar 2023 (15:54 IST)
ಈ ಬಾರಿ ನಾಯಕರ ವ್ಯಪಾಕ ಪ್ರಚಾರವಿರುತ್ತೆ.ರಾಷ್ಟ್ರೀಯ ನಾಯಕರು ಎಲ್ಲಾ ರಾಜ್ಯದಲ್ಲಿ ಪ್ರಚಾರಕ್ಕೆ ಬರ್ತಾರೆ. ಇಡೀ ರಾಜ್ಯ ಸುತ್ತಿ ಬಂದಿದ್ದೇನೆ. ಸಂಪೂರ್ಣ ವಿಶ್ವಾಸವಿದೆ.ನಮಗೆ ಸ್ಪಷ್ಟವಾದ ಬಹುಮತ ಬರಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ.ಚುನಾವಣಾ ಘೋಷಣೆ ನಂತರ ನಮ್ಮದು ಟಿಕೆಟ್ ಘೋಷಣೆ ಮಾಡ್ತೀವಿ..
ಮೋದಿಯವರು ಮೈಸೂರಿಗೆ ಬರ್ತಾರೆ.ಹುಲಿಗಳ ಸಂರಕ್ಷಣಾ ದಿನಾಚರಣೆ ಗೆ ಬರ್ತಾರೆ.ಆ ಕಾರ್ಯಕ್ರಮ ಮೊದಲೇ ನಿಗಿದಿಯಾಗಿತ್ತು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅಲ್ಲದೇ ಇಷ್ಟು ದಿನ ಮನೆಗೆ ಬಂದ ಜನರ ಅಹವಾಲು ಸ್ವೀಕರಿಸಿದೆ.ನಾಳೆಯಿಂದ ಸ್ವೀಕರಿಸಲು ನೀತಿ ಸಂಹಿತೆ ಅಡ್ಡಿ ಆಗುತ್ತೆ .ಕಾನೂನು ಪ್ರಕಾರ ನಾವು ನಡೆದುಕೊಳ್ಳಬೇಕಲ್ವಾ ಎಂದು ಜನತಾ ದರ್ಶನ ಕುರಿತ ಪ್ರಶ್ನೆಗೆ ಸಿಎಂ ಉತ್ತರ ನೀಡಿದ್ದಾರೆ.ಒಂದು ಹಂತವೋ..ಎರಡು ಹಂತದ ಚುನಾವಣೆಯೋ ಅನ್ನೋ ಪ್ರಶ್ನೆಗೆ ಕಾದು ನೋಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.